ರಸ್ತೆಯ ಡಿವೈಡರ್‌ಗೆ ಲಾರಿ ಢಿಕ್ಕಿ: 21 ಮಂದಿ ಕೂಲಿ ಕಾರ್ಮಿಕರಿಗೆ ಗಾಯ
ಮಂಗಳೂರು, ಜ.9: ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ಗೆ ಲಾರಿ ಢಿಕ್ಕಿಯಾದ ಪರಿಣಾಮ ಲಾರಿಯಲ್ಲಿದ್ದ 21 ಮಂದಿ ಕೂಲಿ ಕಾರ್ಮಿಕರು ಗಾಯಗೊಂಡ ಘಟನೆ ನಗರದ ಹೊರವಲಯ ವಳಚ್ಚಿಲ್‌ನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಉತ್ತರ ಕರ್ನಾಟಕ ಮೂಲದ ಹಾಗೂ ಪ್ರಸ್ತುತ ನಗರದ ಜ್ಯೋತಿ, ಕಾವೂರು ನಿವಾಸಿಗಳಾದ ಯಮನಪ್ಪ, ಬಸವರಾಜ, ಶಶಿಧರ್, ವಿರೂಪಾಕ್ಷ, ಯಮನಪ್ಪ, ಮಮ್ಮುಸಾಬ್, ಅನಿಲ್, ಪ್ರಶಾಂತ್, ಪೀರ್‌ಸಾಬ್, ಮುತ್ತಣ್ಣ ಚಲವಾದಿ, ಬಸವರಾಜ, ರಮ್ಝಾನ್, ಹುಚ್ಚಪ್ಪ, ಶರಣಪ್ಪ, ರಮ್ಝಾನ್ ಸಾಬ್, ಪರದೇಶ್, ಯಮನಪ್ಪ, ಶರಣಪ್ಪ, ಬಸವರಾಜ, ಕರಿಯಪ್ಪ, ಯಮನಪ್ಪ ಗಾಯಾಳುಗಳು. ಇವರಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಂಜೆ ಎಂಬಲ್ಲಿ ಕೆಇಬಿ ಕಂಬ ಎಳೆಯಲು 21 ಕೂಲಿ ಕಾರ್ಮಿಕರು ಲಾರಿಯಲ್ಲಿ ತೆರಳುತ್ತಿದ್ದರು. ಬುಧವಾರ ಬೆಳಗ್ಗೆ 8:30ಕ್ಕೆ ಮಂಗಳೂರು ನಗರದ ವಳಚ್ಚಿಲ್ ಎಂಬಲ್ಲಿ ಲಾರಿ ತಲುಪುತ್ತಿದ್ದಂತೆ ಚಾಲಕ ವಿಠ್ಠಲ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ಗೆ ಢಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದ್ದು, ಪರಿಣಾಮ ಲಾರಿ ಪಲ್ಟಿಯಾಗಿ ಡಾಮಾರು ರಸ್ತೆಗೆ ಬಿದ್ದು ಲಾರಿಯಲ್ಲಿದ್ದ 21 ಕಾರ್ಮಿಕರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಬಂಟ್ವಾಳದ ತುಂಬೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಕುರಿತು ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







