ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಬಂದ್ ಯಶಸ್ವಿ: ಬಿ.ಕೆ.ಇಮ್ತಿಯಾಝ್

ಮಂಗಳೂರು, ಜ.9: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕರ 48 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ ಮಂಗಳೂರು ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ ಎಂದು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ತಿಳಿಸಿದ್ದಾರೆ.
ಹಳೆ ಬಂದರಿನ ಕಿರಾಣಾ ವಿಭಾಗ, ಒಣಮೀನು ವಿಭಾಗ, ಅಡಿಕೆ ಸಂಸ್ಕರಣೆ ಮತ್ತು ಕಮಿಷನ್ ವಿಭಾಗ, ಟ್ರಾನ್ಸ್‌ಪೋರ್ಟ್ ಮತ್ತು ಜನರಲ್ ಗೂಡ್ಸ್ ವಿಭಾಗದ ಸಾವಿರಾರು ಕಾರ್ಮಿಕರು ಎರಡು ದಿನಗಳ ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕಾರ್ಮಿಕರ ಐಕ್ಯತೆಯನ್ನು ಬಲಗೊಳಿಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸರಿಯಾದ ಎಚ್ಚರಿಕೆಯನ್ನು ನೀಡಿದ್ದಾರೆ.
ಬಂದ್ ಅಲ್ಲ ಮುಷ್ಕರ
ಭಾರತ ಬಂದ್ ಎಂಬುದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ. ಕಾರ್ಮಿಕ ಸಂಘಟನೆಗಳು ಬಂದ್ ಬಗ್ಗೆ ಕರೆಯನ್ನು ಕೊಟ್ಟಿಲ್ಲ ಈ ಬಗ್ಗೆ ಕರಪತ್ರಗಳನ್ನು ಸಹ ಮುದ್ರಿಸಿಲ್ಲ. ಕಾರ್ಮಿಕರು ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
- ಬಿ.ಕೆ. ಇಮ್ತಿಯಾಝ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ





