ಕದ್ರಿ: ಮಲ್ಲಿಕಾ ಕಲಾವೃಂದದ 69ನೇ ವರ್ಷದ ವಿವಿಧ ಕಾರ್ಯಕ್ರಮ
ಮಂಗಳೂರು , ಜ.9: ಇಲ್ಲಿನ ಕದ್ರಿ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಜ.14ರಿಂದ 25ವರೆಗೆ ಮಲ್ಲಿಕಾ ಕಲಾವೃಂದ 69ನೇ ವರ್ಷದ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಚರಣೆ ಮಾಡಲಾಗುತ್ತದೆ ಎಂದು ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷ ಸುಧಾಕರ್ ರಾವ್ ಪೇಜಾವರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದರ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕಲಾವಿದರಿಗೆ ವೇದಿಕೆಯನ್ನು ಒದಗಿಸಿಕೊಡಲಾಗುತ್ತಿದೆ. 20ರಂದು ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ರಜಾ ದಿನಗಳಲ್ಲಿ ಹಗಲಿನಲ್ಲಿಯೂ ಕಾರ್ಯಕ್ರಮ ನಡೆಯುತ್ತವೆ. 110 ತಂಡಗಳಿಂದ 3,000 ಕಲಾವಿದರು ಪಾಲ್ಗೊಳ್ಳಲಿದ್ದಾರೆ. 19ರಂದು ರಥೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವು ಇದೆ. ಹಿರಿಯ ಕಲಾವಿದರನ್ನು ಸನ್ಮಾಸಿ, ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸಲಾಗು ತ್ತದೆ. 12 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಸನತ್ ಕುಮಾರ್ ಜೈನ್, ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಸುರೇಶ್ ಕುಮಾರ್, ಮಹಿಳಾ ವಿಭಾಗದ ಸಂಚಾಲಕಿ ಶೋಭಾ ಎಸ್. ಪೇಜಾವರ್, ರವೀಂದ್ರ ಶೆಟ್ ಇದ್ದರು.





