ಕಲಾಶ್ರೀ ಪ್ರಶಸ್ತಿಗೆ ಭಾಜನಳಾದ ಮಡಿಕೇರಿ ವಿದ್ಯಾರ್ಥಿನಿ ಮೌನ ವಿ.ಜೆ

ಮಡಿಕೇರಿ. ಜ.9: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರಿನ ಬಾಲಭವನದಲ್ಲಿ ಜರುಗಿದ ರಾಜ್ಯ ಮಟ್ಟದ ಸೃಜನಾತ್ಮಕ ಬರೆವಣಿಗೆ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಜೋಸೇಫರ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಮೌನ ವಿ.ಜೆ ಪ್ರಥಮ ಸ್ಥಾನ ಗಳಿಸಿ 'ಕಲಾಶ್ರೀ ಪ್ರಶಸ್ತಿ'ಗೆ ಭಾಜನಳಾಗಿದ್ದಾಳೆ.
ಮೌನ ವಿ.ಜೆ ಸ್ಥಳದಲ್ಲಿಯೇ ಕತೆ, ಕವನ ಮತ್ತು ಪ್ರಬಂಧ ರಚಿಸಿ ಸೃಜನಶೀಲ ಬರೆವಣಿಗೆಯಲ್ಲಿ ತೋರಿದ ಅಪ್ರತಿಮ ಸಾಧನೆಗಾಗಿ ಈ ಪುರಸ್ಕಾರ ಸಂದಿದೆ . ಸಚಿವೆ ಜಯಮಾಲ, ಬಾಲಭವನ ನಿರ್ದೇಶಕಿ ರತ್ನಾ ಕಲಂದಾನಿ ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ವೈ ಮರಿಸ್ವಾಮಿ ಪ್ರಶಸ್ತಿ ಪ್ರಧಾನ ಮಾಡಿದರು. ಮೌನ ಮಡಿಕೇರಿಯ ಜಯಕುಮಾರ್ ಮತ್ತು ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರ ಪುತ್ರಿಯಾಗಿದ್ದು, ಈವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನಳಾಗಿದ್ದಾಳೆ.
Next Story





