ಬೆಂವಿವಿ ಕುಲಸಚಿವ ಶಿವಣ್ಣ ಉಪಾಧ್ಯಾಕ್ಷರಾಗಿ ಆಯ್ಕೆ
![ಬೆಂವಿವಿ ಕುಲಸಚಿವ ಶಿವಣ್ಣ ಉಪಾಧ್ಯಾಕ್ಷರಾಗಿ ಆಯ್ಕೆ ಬೆಂವಿವಿ ಕುಲಸಚಿವ ಶಿವಣ್ಣ ಉಪಾಧ್ಯಾಕ್ಷರಾಗಿ ಆಯ್ಕೆ](https://www.varthabharati.in/sites/default/files/images/articles/2019/01/10/172137.jpg)
ಬೆಂಗಳೂರು, ಜ.10: ಬೆಂಗಳೂರು ವಿಶ್ವವಿದ್ಯಾಲಯ ಉಪ ಕುಲಸಚಿವ ಶಿವಣ್ಣ ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹೈದರಾಬಾದ್ನಲ್ಲಿ ಆಯೋಜಿಸಿದ್ದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸುಮಾರು 286 ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಸಂಘಗಳ ಸುಮಾರು 480 ಜನ ಪದಾಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಹಾಗೆಯೆ ಬೆಂಗಳೂರು ವಿಶ್ವವಿದ್ಯಾಲಯ ಹಣಕಾಸು ವಿಭಾಗದ ಅಧೀಕ್ಷಕಿ ಎನ್. ಸುನಂದಾ ಹಾಗೂ ಬೆಂವಿವಿ ಹಣಕಾಸು ವಿಭಾಗದ ಸಹಾಯಕ ಆರ್.ರಂಗಧಾಮ ಅವರನ್ನು ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟದ ಕಾರ್ಯಕಾರಿಣಿ ಸಭೆಯ ನಿರ್ದೇಶಕರುಗಳನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಟನೆಯಲ್ಲಿ ತಿಳಿಸಲಾಗಿದೆ.
Next Story