ಕರ್ನಾಟಕ ಅಲೆಮಾರಿ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷರಾಗಿ ಹರ್ಷಿತಾ ಗಾಂಧಿ ನೇಮಕ
ಬೆಂಗಳೂರು, ಜ 10: ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷರಾಗಿ ಹರ್ಷಿತಾ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಚಾವಡೆ ಲೋಕೇಶ್ ಅವರು ಈ ನೇಮಕಾತಿ ಮಾಡಿದ್ದಾರೆ.
ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಸಮಸ್ಯೆಗಳ ಬಗ್ಗೆ ರಾಜ್ಯಾಧ್ಯಂತ ಪ್ರವಾಸ ಕೈಗೊಂಡು ಅಧ್ಯಯನ ನಡೆಸುವ ಜತೆಗೆ ಶೀರ್ಘದಲ್ಲೇ ರಾಜ್ಯಮಟ್ಟದ ಮಹಿಳಾ ಸಮಾವೇಶ ನಡೆಸುವುದಾಗಿ ನೂತನ ಅಧ್ಯಕ್ಷರಾದ ಹರ್ಷಿತಾ ಗಾಂಧಿ ತಿಳಿಸಿದ್ದಾರೆ.
30 ವರ್ಷಗಳ ಪುರಾತನ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ಹರ್ಷಿತಾ ಗಾಂಧಿ ಅವರು ನಿರ್ಲಕ್ಷಿತ ಮತ್ತು ಶೋಷಿತ ಸಮುದಾಯದವರನ್ನು ಉತ್ತಮ ರೀತಿಯಲ್ಲಿ ಸಂಘಟನೆ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಅಧ್ಯಕ್ಷ ಕೆ ಬಾಸ್ಕರ್ ದಾಸ್ ಎಕ್ಕಾರು ಸಲಹೆ ಮಾಡಿದ್ದಾರೆ.
Next Story





