ಉ.ಪ್ರದೇಶ: ಗೋಶಾಲೆಗೆ ಸಾಗಿಸುತ್ತಿದ್ದಾಗ 3 ಬಿಡಾಡಿ ದನಗಳ ಸಾವು

ಸಾಂದರ್ಭಿಕ ಚಿತ್ರ
ಮುಝಫ್ಫರನಗರ,ಜ.10: ಗುರುವಾರ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿನ ಗೋಶಾಲೆಯೊಂದಕ್ಕೆ ಟ್ರಕ್ಗಳಲ್ಲಿ ಸಾಗಿಸಲಾಗುತ್ತಿದ್ದ 49 ಬಿಡಾಡಿ ದನಗಳ ಪೈಕಿ ಮೂರು ದನಗಳು ಮೃತಪಟ್ಟಿದ್ದು,ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ರಾಜ್ಯದಲ್ಲಿಯ ಎಲ್ಲ ಬಿಡಾಡಿ ದನಗಳನ್ನು ಒಂದು ವಾರದೊಳಗೆ ಗೋಶಾಲೆಗಳಿಗೆ ಸ್ಥಳಾಂತರಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಜ.3ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶ ನೀಡಿದ್ದರು.
ರಾಜ್ಯದ ಕೆಲವು ಭಾಗಗಳಲ್ಲಿ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಬಿಡಾಡಿ ದನಗಳನ್ನು ಸರಕಾರಿ ಶಾಲೆಯಂತಹ ಸಾರ್ವಜನಿಕ ಕಟ್ಟಡಗಳ ಆವರಣಗಳಲ್ಲಿ ಕೂಡಿ ಹಾಕಿದ್ದಾರೆ.
Next Story





