ಖಂಡಿಗ: ಜ.13ರಂದು ಉಚಿತ ವೈದ್ಯಕೀಯ ಶಿಬಿರ
ವಿಟ್ಲ, ಜ.10: ಇಲ್ಲಿಗೆ ಸಮೀಪದ ನೀರ್ಕಜೆ ಖಂಡಿಗದ ಕೆಎಫ್‌ಸಿ ಹೆಲ್ಪ್‌ಲೈನ್‌ನ 2ನೇ ವಾರ್ಷಿಕದ ಪ್ರಯುಕ್ತ ಕೇಪು ಗ್ರಾಪಂ ಮತ್ತು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಜ.13ರಂದು ನೀರ್ಕಜೆಯ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9ರಿಂದ ಅಪರಾಹ್ನ 2ರವರೆಗೆ ನಡೆಯುವ ಶಿಬಿರವನ್ನು ನೀರ್ಕಜೆ ಮಸೀದಿಯ ಖತೀಬ್ ನಝೀರ್ ಸಅದಿ ಉದ್ಘಾಟಿಸುವರು. ಕೇಪು ಗ್ರಾಪಂ ಅಧ್ಯಕ್ಷ ತಾರಾನಾಥ್ ಆಳ್ವ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





