ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರಾವಳಿಯ ಪ್ರತಿಭೆ

ಮಂಗಳೂರು, ಜ.10: ಹೊಸದಿಲ್ಲಿಯ ರಾಜಪಥದಲ್ಲಿ ಜ.26ರಂದು ಜರುಗುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರಾವಳಿಯ ಪ್ರತಿಭೆ ಚಿರಶ್ರೀ ಪಿ. ಎನ್ನೆಸ್ಸೆಸ್‌ನ್ನು ಪ್ರತಿನಿಧಿಸಲಿದ್ದಾರೆ.
ಕರ್ನಾಟಕದ ಎನ್ನೆಸ್ಸೆಸ್ ಪಡೆಯನ್ನು ಪ್ರತಿನಿಧಿಸುವ ಚಿರಶ್ರೀ ಉಡುಪಿಯ ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ. ಕಾಲೇಜಿನ ರ್ಟ್ರಾಷೀಯ ಸೇವಾ ಯೋಜನೆಯಲ್ಲಿ ಸಕ್ರಿಯರಾಗಿರುವ ಚಿರಶ್ರೀ ಕರ್ನಾಟಕ ತಂಡದಿಂದ ಆಯ್ಕೆಯಾಗಿರುವ 14 ಮಂದಿಯ ಪೈಕಿ ಒಬ್ಬರು. ಇವರೊಂದಿಗೆ ಇತರ 6 ಮಂದಿ ಬಾಲಕಿಯರೂ ಆಯ್ಕೆಯಾಗಿದ್ದಾರೆ.
ಉಡುಪಿಯ ಗುಂಡಿಬೈಲಿನ ಪಿ. ಗಣೇಶ್ ಆಚಾರ್ಯ ಮತ್ತು ಸುಮಾ ಗಣೇಶ್ ದಂಪತಿಯ ದ್ವಿತೀಯ ಪುತ್ರಿಯಾಗಿರುವ ಈಕೆ ಯಕ್ಷಗಾನ ಹಾಗೂ ಭರತನಾಟ್ಯ ಕ್ಷೇತ್ರದಲ್ಲೂ ಸಾಧನೆ ಮೆರೆದಿದ್ದಾರೆ.
Next Story





