ವಿಟ್ಲ: ವಿಜಯ ಬ್ಯಾಂಕ್ ವಿಲೀನ ಖಂಡಿಸಿ ಪ್ರತಿಭಟನೆ
ಬಂಟ್ವಾಳ, ಜ. 10: ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ವಿಟ್ಲದ ವಿಜಯ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್ ಮಾತನಾಡಿ, ಉತ್ತಮ ಲಾಭ ಕೊಡುವ ವಿಜಯ ಬ್ಯಾಂಕ್ ವಿಲೀನ ಕಾರ್ಯ ಕೇಂದ್ರ ಸರಕಾರದ ಭಂಡತನದ ನಿರ್ಧಾರವಾಗಿದೆ. ಇದು ಮೂರ್ಖತನದ ಪರಮಾಧಿಕಾರಯಾಗಿದೆ. ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಈ ಬ್ಯಾಂಕ್ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಇದೀಗ ಮುಳುಗುತ್ತಿರುವ ಬ್ಯಾಂಕ್‍ನೊಂದೊಗೆ ವಿಜಯ ಬ್ಯಾಂಕ್ ವಿಲೀನಗೊಳ್ಳುತ್ತಿರುವುದು ಜಿಲ್ಲೆಯ ನಾಗರಿಕರ ಸ್ವಾಭಿಮಾನಕ್ಕೆ ದಕ್ಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಮಾನಾಥ ವಿಟ್ಲ, ಪ್ರವೀಣ್ ಚಂದ್ರ ಆಳ್ವ, ಪದ್ಮನಾಭ ಪೂಜಾರಿ, ರಾಜೇಶ್ ಕುಮಾರ್ ಬಾಳೆಕಲ್ಲು, ಅಶೋಕ್ ಕುಮಾರ್ ಶೆಟ್ಟಿ, ದಮಯಂತಿ, ಹಸೈನಾರ್ ನೆಲ್ಲಿಗುಡ್ಡೆ, ಶಮೀರ್ ಪಳಿಕೆ, ಪ್ರಭಾಕರ್ ಭಟ್, ಭವಾನಿ ರೈ ಕೊಲ್ಯ, ಮುರಳೀಧರ ಶೆಟ್ಟಿ, ವಿ.ಕೆ.ಎಂ ಅಶ್ರಫ್, ಶ್ರೀಧರ್ ಬಾಳೆಕಲ್ಲು, ಅಬ್ದುಲ್ ಕರೀಂ ಕುದ್ದುಪದವು, ಅಬ್ದುಲ್ ರಹಿಮಾನ್ ಕರುಂಬಳ, ಅಬ್ದುಲ್ ಖಾದ್ರಿ, ಶ್ರೀನಿವಾಸ ಶೆಟ್ಟಿ ಕೊಲ್ಯ, ಎಲ್ಯಣ್ಣ ಪೂಜಾರಿ, ಎಂ.ಕೆ ಮೂಸಾ, ಸುಧಾಕರ ಪೂಜಾರಿ, ಎಸ್.ಕೆ. ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.







