ಜುಡೋದಲ್ಲಿ ದಿಲ್ಲಿ ಪ್ರಾಬಲ್ಯ: ಮೂರು ಚಿನ್ನಕೈವಶ
ಖೇಲೊ ಇಂಡಿಯಾ ಯೂತ್ ಗೇಮ್ಸ್

ಪುಣೆ, ಜ.10: ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಗುರುವಾರ ನಡೆದ ಜುಡೋಸ್ ಸ್ಪರ್ಧೆಯಲ್ಲಿ ದಿಲ್ಲಿ ಜುಡೋಗಳು ಆರು ಚಿನ್ನದ ಪದಕಗಳ ಪೈಕಿ ಮೂರನ್ನು ಬಾಚಿಕೊಂಡು ಪ್ರಾಬಲ್ಯ ಮೆರೆದಿದ್ದಾರೆ. ದಿಲ್ಲಿ ಮೂರು ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದೆ. ಅಂಡರ್-17 ವಿಭಾಗದಲ್ಲಿ ಉತ್ತರಪ್ರದೇಶ, ಹರ್ಯಾಣ ಹಾಗೂ ಗುಜರಾತ್ ಜುಡೋಗಳು ತಲಾ 1 ಚಿನ್ನ ಹಂಚಿಕೊಂಡರು. ಹರ್ಯಾಣ 1 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚು ಸಹಿತ ನಾಲ್ಕು ಪದಕಗಳನ್ನು ಜಯಿಸಿದೆ. 44 ಕೆಜಿ ವಿಭಾಗದ ಫೈನಲ್‌ನಲ್ಲಿ ದಿಲ್ಲಿಯ ಮಾನಿನಿ ಸಿಂಗ್, ಮುಸ್ಕಾನ್‌ರನ್ನು ಮಣಿಸಿದರು. 55 ಕೆಜಿ ವಿಭಾಗದಲ್ಲಿ ದಿಲ್ಲಿಯ ಯಶ್‌ವೀರ್ ಸಿಂಗ್ (ಹರ್ಯಾಣ)ಪಂಜಾಬ್‌ನ ಅಭಿಷೇಕ್‌ರನ್ನು ಸೋಲಿಸಿದರು. ಗುಜರಾತ್‌ನ ಸೋನಾಲ್ ಭೂಪಟ್ ಬಾಲಕಿಯರ 40 ಕೆಜಿ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದರು. ಉತ್ತರಪ್ರದೇಶದ ಸೋಹನ್ ಸಿಂಗ್ 50 ಕೆಜಿ ಒಳಗಿನ ವಿಭಾಗದಲ್ಲಿ ಹರ್ಯಾಣದ ಹರೀಶ್‌ರನ್ನು ಸೋಲಿಸಿ ತನ್ನ ರಾಜ್ಯಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು.
Next Story





