Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಒತ್ತುವರಿ ತೆರವು ಸಂದರ್ಭ ಒತ್ತಡಗಳಿಗೆ...

ಒತ್ತುವರಿ ತೆರವು ಸಂದರ್ಭ ಒತ್ತಡಗಳಿಗೆ ಮಣಿಯಬೇಡಿ: ಎಸಿಸಿಎಫ್ ಅಣ್ಣಯ್ಯ

ವಾರ್ತಾಭಾರತಿವಾರ್ತಾಭಾರತಿ11 Jan 2019 7:26 PM IST
share
ಒತ್ತುವರಿ ತೆರವು ಸಂದರ್ಭ ಒತ್ತಡಗಳಿಗೆ ಮಣಿಯಬೇಡಿ: ಎಸಿಸಿಎಫ್ ಅಣ್ಣಯ್ಯ

ಚಿಕ್ಕಮಗಳೂರು, ಜ.11: ಅರಣ್ಯ ಭೂಮಿ ಒತ್ತುವರಿ ತೆರವು ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿ ಯಾವುದೇ ಒತ್ತಡಗಳಿಗೆ ಮಣಿಯದೆ ಕಾನೂನು ರೀತಿ ಕ್ರಮಕ್ಕೆ ಮುಂದಾಗಬೇಕೆಂದು ಎಂದು ನಿವೃತ್ತ ಎಸಿಸಿಎಫ್ ಎ.ಎಂ.ಅಣ್ಣಯ್ಯ ತಿಳಿಸಿದರು.

ನಗರದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಡೆದ ಕರ್ನಾಟಕ ಅರಣ್ಯ ಕಾಯ್ದೆ 1963- 64ಎ ಕುರಿತ ನಡಾವಳಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ, ಕಂದಾಯ, ಪೊಲೀಸ್, ಸರ್ವೇ ಇಲಾಖೆ ಎಲ್ಲರ ಜೊತೆ ಅನ್ಯೋನ್ಯ ಸಂಪರ್ಕ ಇಟ್ಟುಕೊಂಡು ಅರಣ್ಯ ಭೂಮಿ ಒತ್ತುವರಿ ತಡೆಯಲು ಹಾಗೂ ಕಾನೂನು ಪ್ರಕಾರ ಕ್ರಮಕ್ಕೆ ಸೂಕ್ತ ವಿಚಾರಣೆ ಮಾಡಲು ಸರ್ಕಾರಿ ವಕೀಲರಿಗೆ ಸಹಕಾರಿ ಆಗುವ ರೀತಿ ಕೆಲಸ ಮಾಡುವುದು ಮುಖ್ಯವಾಗಬೇಕು.

ನಮ್ಮ ಕಾನೂನನ್ನು ಅವಲೋಕಿಸಿದರೆ ಮೊದಲ ಉಲ್ಲೇಖವಿರುವುದು "ಯಾವುದೇ ವ್ಯಕ್ತಿಯಾದರೂ" ಎನ್ನುವ ಪದ. ಮೊದಲು ಅದನ್ನು ಅಧಿಕಾರಿಗಳು ಗುರುತು ಮಾಡಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು, ಭೂಮಿಯೊಂದೇ ಜೀವಂತ ಗ್ರಹ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬದುಕಲು ಬೇಕಾದ ಗಾಳಿ ನೀರು ಮಣ್ಣು ಎಲ್ಲವೂ ಇಲ್ಲಿದೆ. ಇದನ್ನು ರಕ್ಷಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯ ಎಂದು ಕಾನೂನಿನಲ್ಲಿ ಹೇಳಿದೆ. ಅದರ ಸುಯೋಗ ಅರಣ್ಯ ಇಲಾಖೆಗೆ ಹೆಚ್ಚು ಒದಗಿಬಂದಿದೆ ಎಂದರು.

ಅರಣ್ಯ, ಕಂದಾಯ, ಪೊಲೀಸ್, ಸರ್ವೇ ಇಲಾಖೆ ಎಲ್ಲರ ಜೊತೆ ಅನ್ಯೋನ್ಯ ಸಂಪರ್ಕ ಇಟ್ಟುಕೊಂಡು ಅರಣ್ಯ ಭೂಮಿ ಒತ್ತುವರಿ ತಡೆಯಲು ಹಾಗೂ ಕಾನೂನು ಪ್ರಕಾರ ಕ್ರಮಕ್ಕೆ ಸೂಕ್ತ ವಿಚಾರಣೆ ಮಾಡಲು ಸರಕಾರಿ ವಕೀಲರಿಗೆ ಸಹಕಾರ ಆಗುವ ರೀತಿ ಕೆಲಸ ಮಾಡುವುದು ಮುಖ್ಯವಾಗಬೇಕು ಎಂದ ಅವರು,  ಅರಣ್ಯ  ನಿಯಮವೇ ನಮ್ಮ ಕೈಪಿಡಿ. ಅದು ಸರಕಾರದ ಆದೇಶ. ಬಹಳಷ್ಟು ಸಂದರ್ಭಗಳಲ್ಲಿ  ಅದನ್ನು ಜಾರಿಗೆ ತರದೇ ಅಲ್ಲೊಂದು ಇಲ್ಲೊಂದಷ್ಟು ಪ್ರಯತ್ನಗಳನ್ನು ಮಾತ್ರ ಮಾಡಿದ್ದೆವೆ. ಅದು ಸರಿಯಲ್ಲ. ಕ್ರಮಕೈಗೊಳ್ಳಲು ಸಾಧ್ಯತೆ ಇರುವ ಕಡೆಯೂ ಕನೂನನ್ನು ಗಾಳಿಗೆ ತೂರಲು ಸಾಧ್ಯವಿಲ್ಲ ಎಂದರು.

ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಭೂಮಿಯೊಂದೇ ಜೀವಂತ ಗ್ರಹ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬದುಕಲು ಬೇಕಾದ ಗಾಳಿ ನೀರು ಮಣ್ಣು ಎಲ್ಲವೂ ಇಲ್ಲಿದೆ. ಇದನ್ನು ರಕ್ಷಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯ ಎಂದು ಕಾನೂನಿನಲ್ಲಿ ಹೇಳಿದೆ. ಅದರ ಸುಯೋಗ ಅರಣ್ಯ ಇಲಾಖೆಗೆ ಹೆಚ್ಚು ಒದಗಿಬಂದಿದೆ ಎಂದರು.

ಅರಣ್ಯ ನಿಯಮಗಳೇನು? ನಿಮ್ಮ  ಕರ್ತವ್ಯಗಳೇನು ಎಲ್ಲವೂ ನಿಮಗೆ ಗೊತ್ತಿರುತ್ತದೆ ಅದರ ಪ್ರಕಾರ ಕೆಲಸ ಮಾಡಬೇಕಿದೆ. ನಮ್ಮ ಬೌಂಡರಿಯನ್ನು ಪ್ರತಿವಾರ, ಪ್ರತಿ ತಿಂಗಳು ನೋಡಿ ವರದಿ ಕೊಟ್ಟಿದ್ದರೆ ಈ ಪ್ರಮಾಣದ ಸಮಸ್ಯೆ ಇರುತ್ತಿರಲಿಲ್ಲ ಎಂದರು.
ವೃತ್ತದ ಮುಖ್ಯ ಅರಣ್ಯಾಧಿಕಾರಿ ವಿಜಯ್ ಮೋಹನ್‍ರಾಜ್ ಮಾತನಾಡಿ, ಎಲ್ಲ ಜಮೀನನ್ನು ಅಭಿವೃದ್ದಿ ಹೆಸರಲ್ಲಿ ಕೊಡಲಾಗಿದೆ. ಉಳಿದಿರುವುದು ಅರಣ್ಯ ಭೂಮಿ ಮಾತ್ರ. ಅದನ್ನು ಉಳಿಸಿಕೊಳ್ಳಲು ಹೆಚ್ಚಿನ ಆಧ್ಯತೆ ನೀಡಬೇಕಿದೆ. ಯೋಜನಾ ಸಿಬ್ಬಂಧಿ ಗಡಿ ಗುರುತಿಸಿ ಪಿಲ್ಲರ್ ಹಾಕಿ ಹೋಗುತ್ತಾರೆ. ಅದರ ಅಂತಿಮ ರಕ್ಷಣೆ ಕಾರ್ಯವನ್ನು ಸಂರಕ್ಷಿತ ಸಿಬ್ಬಂಧಿಗಳು ಮಾಡಬೇಕಾಗುತ್ತದೆ ಎಂದರು.

ಲ್ಯಾಂಡ್ ಗ್ರಾಬಿಂಗ್ ಪ್ರಿವೆನ್ಶನ್ ಆಕ್ಟ್ ಕಾನೂನಿಗೆ ಹೆಚ್ಚು ಬಲ ಕೊಟ್ಟಿದೆ. ಹಿಂದೆ ಜಮೀನು ಇಟ್ಟುಕೊಳ್ಳುತ್ತೇವೆ. ತೀವ್ರ ಒತ್ತಡ ಬಂದರೆ ಅರಣ್ಯ ಇಲಾಖೆಯವರು ಬಿಟ್ಟುಬಿಡುತ್ತಾರೆ ಎನ್ನುವ ಧೋರಣೆ ಇತ್ತು. ಇಂದು ಹಾಗಿಲ್ಲ. ಕಾನೂನು ಬದಲಾಗಿದೆ ಶಿಕ್ಷೆಗೂ ಅವಕಾಶವಿದೆ ಎಂದರು.
ಕಾರ್ಯಾಗಾರದಲ್ಲಿ ಭದ್ರಾ ಹುಲಿಯೊಜನೆ ನಿರ್ದೇಶಕ ಧನಂಜಯ್, ಎಪಿಪಿ ರಾಯ್ಕರ್, ಡಿಸಿಎಫ್ ಕುಮಾರ್, ಶಂಕರ್,ಎಸಿಎಫ್ ಚೆಂಗಪ್ಪ ಹಾಗೂ ಚಿಕ್ಕಮಗಳೂರು ಅರಣ್ಯ ವೃತ್ತದ ಎಸಿಎಫ್, ಆರ್‍ಎಫ್‍ಒ, ಡಿಆರ್‍ಎಫ್‍ಒಗಳು ಭಾಗವಹಿಸಿದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X