Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಣಿಪಾಲ: ಇಂಡಿಯನ್ ಮಾರ್ಸ್‌ ರೋವರ್...

ಮಣಿಪಾಲ: ಇಂಡಿಯನ್ ಮಾರ್ಸ್‌ ರೋವರ್ ಚಾಲೆಂಜ್; ಬಾಂಗ್ಲಾ, ಪೊಲಂಡ್ ತಂಡಗಳಿಂದ ಉತ್ತಮ ಪ್ರದರ್ಶನ

ವಾರ್ತಾಭಾರತಿವಾರ್ತಾಭಾರತಿ11 Jan 2019 8:24 PM IST
share
ಮಣಿಪಾಲ: ಇಂಡಿಯನ್ ಮಾರ್ಸ್‌ ರೋವರ್ ಚಾಲೆಂಜ್; ಬಾಂಗ್ಲಾ, ಪೊಲಂಡ್ ತಂಡಗಳಿಂದ ಉತ್ತಮ ಪ್ರದರ್ಶನ

ಮಣಿಪಾಲ, ಜ.11: ಇಲ್ಲಿನ ಎಂಐಟಿ ಮೈದಾನದಲ್ಲಿ ನಿನ್ನೆ ಪ್ರಾರಂಭಗೊಂಡಿರುವ ಎರಡನೇ ಇಂಡಿಯನ್ ರೋವರ್ ಚಾಲೆಂಜ್‌ನ ಎರಡನೇ ದಿನದಂದು ಬಾಂಗ್ಲಾದೇಶದ ಐಯುಟಿ ಹಾಗೂ ಪೊಲಂಡ್‌ನ ಎಜಿಎಚ್ ಸ್ಪೇಸ್ ಸಿಸ್ಟಮ್ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು, ಗೆಲುವಿನತ್ತ ದಾಪುಗಾಲು ಹಾಕಿವೆ.

ಮೂರು ದಿನಗಳ ಈ ಸ್ಪರ್ಧೆಯಲ್ಲಿ ವಿದೇಶಗಳಿಂದ ಐದು -ಪೊಲಂಡ್‌ನಿಂದ ಎರಡು ಹಾಗೂ ಬಾಂಗ್ಲಾದೇಶದಿಂದ ಮೂರು- ತಂಡಗಳು ಸೇರಿದಂತೆ ಒಟ್ಟು ಹತ್ತು ತಂಡಗಳು ಭಾಗವಹಿಸಿವೆ. ಭಾರತದಿಂದ ಎಂಐಟಿ ಮದ್ರಾಸ್, ವಿಐಟಿ ವೆಲ್ಲೂರು, ಬಿಐಟಿ ಚೆನ್ನೈ, ಎನ್‌ಐಟಿ ಸೂರತ್ ಹಾಗೂ ದಿಲ್ಲಿ ಇಂಜಿನಿಯರಿಂಗ್ ಕಾಲೇಜು ತಂಡಗಳು ಸ್ಪರ್ಧಿಸಿವೆ. ವೆಲ್ಲೂರಿನಲ್ಲಿ ಕಳೆದ ವರ್ಷ ನಡೆದ ಮೊದಲ ಇಂಡಿಯನ್ ರೋವರ್ ಚಾಲೆಂಜ್‌ನಲ್ಲಿ ಎಂಐಟಿ ಮಣಿಪಾಲ ಚಾಂಪಿಯನ್ ಆಗಿತ್ತು. ಅತಿಥೇಯ ತಂಡವಾಗಿ ಅದಕ್ಕೆ ಇಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ಸ್ಪರ್ಧಾ ಸಮಿತಿಯ ಅಧ್ಯಕ್ಷ ಹಾಗೂ ಎಂಐಟಿ ಮೆಕಾನಿಕಲ್ ಇಂಜಿನಿಯರಿಂಗ್‌ನ ಪ್ರಾಧ್ಯಾಪಕ ಡಾ.ಶ್ರೀಹರಿ ಉಪಾಧ್ಯ ತಿಳಿಸಿದರು.

ಎರಡನೇ ದಿನದಂದು ತಲಾ ಎರಡು ಸ್ಪರ್ಧೆಗಳು (ಟಾಸ್ಕ್) ಮುಗಿದ ಬಳಿಕ ಬಾಂಗ್ಲಾದ ಐಯುಟಿ ಹಾಗೂ ಪೊಲಂಡ್‌ನ ಎಜಿಎಚ್ ಸ್ಪೇಸ್ ಸಿಸ್ಟಮ್ ತಂಡಗಳು ತಲಾ ಒಂದರಲ್ಲಿ ಜಯಗಳಿಸಿದ್ದು ಮುನ್ನಡೆಯಲ್ಲಿವೆ.

ಕಸ್ಟಮ್ಸ್‌ನಲ್ಲಿ ತಡೆ: ಸ್ಪರ್ಧೆಯಲ್ಲಿ ಭಾಗವಹಿಸಲು ಪೊಲಂಡ್‌ನಿಂದ ಬಂದ ಇನ್ನೊಂದು ತಂಡ ವಾರ್ಸಾ ರೋವರ್ ಇಂದು ಸ್ಪರ್ಧೆಯಲ್ಲಿ ಭಾಗವಹಿಸುವಲ್ಲಿ ಯಶಸ್ವಿಯಾಯಿತು. ಪೊಲಂಡ್ ತಂಡ ತಂದ ರೋಬೊಟ್ (ರೋವರ್)ನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಡೆ ಹಿಡಿದಿತ್ತು. ಹೀಗಾಗಿ ತಂಡದ ವಿದ್ಯಾರ್ಥಿಗಳು ಮಣಿಪಾಲಕ್ಕೆ ಬಂದು ಎಂಐಟಿಯ ವರ್ಕ್‌ಶಾಪ್‌ನಲ್ಲಿ ರಾತೋರಾತ್ರಿ ರೋವರ್‌ನ್ನು ತರಾತುರಿಯಿಂದ ನಿರ್ಮಿಸಿ ಇಂದು ಸ್ಪರ್ಧೆಗೆ ಇಳಿಸಿದರೂ ಅದು ನಿರೀಕ್ಷಿತ ಟಾಸ್ಕ್‌ನ್ನು ಮಾಡುವಲ್ಲಿ ಪೂರ್ಣ ಯಶಸ್ಸು ಪಡೆಯಲಿಲ್ಲ. ಮೊದಲ ಟಾಸ್ಕ್‌ನಲ್ಲಿ ಅದು ಪ್ಯಾನೆಲ್‌ನ್ನು ಫಿಕ್ಸ್ ಮಾಡಬೇಕಿತ್ತು.

ಉಪಕರಣಗಳ ಸರ್ವಿಸಿಂಗ್ ಟಾಸ್ಕ್‌ನಲ್ಲಿ ವೆಲ್ಲೂರಿನ ವಿಐಟಿ, ಐಐಟಿ ಮದ್ರಾಸ್, ಎನ್‌ಐಟಿ ಸೂರತ್ ಹಾಗೂ ಐಯುಟಿ ಬಾಂಗ್ಲಾದೇಶ ಹಾಗೂ ಎಜಿಎಚ್ ಸ್ಪೇಸ್ ಸಿಸ್ಟಮ್ ಪೊಲಂಡ್ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಇದರಲ್ಲಿ ಯಾಂತ್ರಿಕ ತೊಂದರೆಯ ಹೊರತಾಗಿಯೂ ಪೊಲಂಡ್ ತಂಡ, ನೀಡಿದ 25 ನಿಮಿಷದಲ್ಲಿ ತನ್ನ ಗುರಿ ಮುಟ್ಟಿ ಗರಿಷ್ಠ ಅಂಕಗಳನ್ನು ಪಡೆಯಿತು.

ರೋವರ್‌ಗೆ ನೀಡಲಾದ ಎರಡನೇ ಟಾಸ್ಕ್, ತಾನೇತಾನಾಗಿ ಮಣ್ಣಿನಲ್ಲಿರುವ ವಸ್ತುವೊಂದನ್ನು ಪತ್ತೆ ಹಚ್ಚುವುದು. ಇದಕ್ಕಾಗಿ ಹೆಚ್ಚಿನ ತಂಡಗಳು ಲಿಡಾರ್ (ದೂರ ಅಳೆಯುವ ಲೇಸರ್ ಲೈಟ್)ನ್ನು ಬಳಸಿದವು. ಇದರಲ್ಲಿ ರೋವರ್ ಯಾರ ನೆರವೂ ಇಲ್ಲದೇ (ಅಟನಾಮಸ್) ಟಾಸ್ಕ್‌ನ್ನು ನಿಭಾಯಿಸಬೇಕಿದ್ದು, ಹೆಚ್ಚಿನ ತಂಡಗಳು ಇದರಲ್ಲಿ ವಿಫಲವಾದವು. ಇದರಲ್ಲಿ ಐಯುಟಿ ಬಾಂಗ್ಲಾದೇಶ ತಂಡ ಗರಿಷ್ಠ ಅಂಕ ಗಳಿಸಿದೆ.

ನಾಳೆ ಮೂರನೇ ಹಾಗೂ ಕೊನೆಯ ಟಾಸ್ಕ್ ನಡೆಯಲಿದ್ದು, ಇದರ ಬಳಿಕ ಗರಿಷ್ಠ ಅಂಕ ಪಡೆದ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಮಂಗಳ ಗ್ರಹದ ಮೇಲೆ ದೂರ ನಿಯಂತ್ರಕದ ಮೂಲಕ ನಿರ್ವಹಣೆ ಮಾಡುವ ರೋವರ್‌ಗಳಿಗೆ ನೀಡಲಾಗುವ ವಿವಿಧ ಟಾಸ್ಕ್‌ಗಳು ಇಂಡಿಯನ್ ರೋವರ್ ಚಾಲೆಂಜ್‌ನ ಪ್ರಮುಖ ಅಂಶವಾಗಿದೆ ಎಂದು ಸ್ಪರ್ಧಾ ಸಮಿತಿಯ ಸಂಚಾಲಕ ಡಾ.ನವನೀತಕೃಷ್ಣ ವರ್ಣೇಕರ್ ತಿಳಿಸಿದ್ದಾರೆ.

ಅಮೆರಿಕದ ನಾಸಾದ ನಿರ್ದೇಶನದಲ್ಲಿ ಈ ಸ್ಪರ್ಧೆ ನಡೆಯುತ್ತದೆ. ವಿಶ್ವದಲ್ಲಿ ಹಲವು ಕಡೆಗಳಲ್ಲಿ ರೋವರ್ ಚಾಲೆಂಜ್ ಸರಣಿಯಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಇವುಗಳಲ್ಲಿ ವಿವಿ ರೋವರ್ ಚಾಲೆಂಜ್, ಇಂಡಿಯನ್ ರೋವರ್ ಚಾಲೆಂಜ್, ಯುರೋಪಿಯನ್ ರೋವರ್ ಚಾಲೆಂಜ್, ಕೆನಡಿಯನ್ ರೋವರ್ ಚಾಲೆಂಜ್ ಸೇರಿವೆ. ಅಂತಿಮ ಸ್ಪರ್ಧೆ ಅಮೆರಿಕದಲ್ಲಿ ನಡೆಯುತ್ತವೆ.

ಕಳೆದ ವರ್ಷ ವೆಲ್ಲೂರಿನ ವಿಐಟಿಯಲ್ಲಿ ನಡೆದ ಇಂಡಿಯನ್ ರೋವರ್ ಚಾಲೆಂಜ್‌ನಲ್ಲಿ ಮಣಿಪಾಲದ ಎಂಐಟಿ ತಂಡ, ಅಗ್ರಸ್ಥಾನ ಪಡೆದಿದ್ದು, ಬಳಿಕ ಏಷ್ಯಾ ಮಟ್ಟದ ಸ್ಪರ್ಧೆಯಲ್ಲೂ ಅಗ್ರಸ್ಥಾನಿಯಾಗಿತ್ತು. ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಎಂಐಟಿ ತಂಡ ಏಳನೇ ಸ್ಥಾನ ಪಡೆದಿತ್ತು ಎಂದು ಡಾ.ಶ್ರೀಹರಿ ಉಪಾಧ್ಯ ವಿವರಿಸಿದರು.

ಎಂಐಟಿಯ ಈ ತಂಡದಲ್ಲಿ ಮೆಕಾನಿಕಲ್, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಯನ್ಸ್, ಇಲೆಕ್ಟ್ರಿಕಲ್ಸ್, ಬಯೋಟೆಕ್ನಾಲಜಿ, ಕಾಮರ್ಸ್ ಸೇರಿದಂತೆ ಒಟ್ಟು ಏಳು ವಿಭಾಗಗಳ 23 ವಿದ್ಯಾರ್ಥಿಗಳು ಸೇರಿ ರೋವರ್ ನಿರ್ಮಿಸಿದ್ದರು. ಈ ರೋವರ್ 50 ಕಿ.ಗ್ರಾಂಗಿಂತ ಕಡಿಮೆ ತೂಕ ಹೊಂದಿರಬೇಕು ಅವರು ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X