Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೆನೆ ಪದರಕ್ಕೆ ‘ಕ್ರಾಂತಿಕಾರಿ’ ಆಮಿಷ?

ಕೆನೆ ಪದರಕ್ಕೆ ‘ಕ್ರಾಂತಿಕಾರಿ’ ಆಮಿಷ?

ಡಾ. ಬಿ. ಭಾಸ್ಕರ ರಾವ್ಡಾ. ಬಿ. ಭಾಸ್ಕರ ರಾವ್12 Jan 2019 12:13 AM IST
share
ಕೆನೆ ಪದರಕ್ಕೆ ‘ಕ್ರಾಂತಿಕಾರಿ’ ಆಮಿಷ?

ದೇಶದ ಬಲಪಂಥೀಯ ರಾಜಕಾರಣದ ಬೆನ್ನೆಲುಬು ಎನ್ನಬಹುದಾದ ಮತ್ತು ಇಷ್ಟರವರೆಗೆ ಮೀಸಲಾತಿ ಎಂದಾಗ ಮೂಗು ಮುರಿಯುತ್ತಿದ್ದ ಬ್ರಾಹ್ಮಣ, ಜಾಟ್, ಠಾಕೂರ್, ರಜಪೂತ, ಮರಾಠಾ ಮೊದಲಾದ ಜಾತಿಗಳಿಗೆ ಸೇರಿದವರು ತಮಗೂ ಮೀಸಲಾತಿ ಮತ್ತು ಆ ಮೂಲಕ ತಮ್ಮ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಹಾಗೂ ಸರಕಾರಿ ನೌಕರಿ ಸಿಕ್ಕೇ ಬಿಟ್ಟಿತೆಂದು ಸಂಭ್ರಮಿಸತೊಡಗಿದ್ದಾರೆ. ಆದರೆ ಕಲ್ಪನೆಯ ಈ ಸಂಭ್ರಮ ಮತ್ತು ಕಠಿಣ ವಾಸ್ತವದ ವಿಭ್ರಮದ ನಡುವೆ ಸಾಗಬೇಕಾದ ದುರ್ಗಮ ಹಾದಿಯ ಅರಿವು ಇವರಲ್ಲಿ ಶೇ. 90 ಮಂದಿಗೆ ಇರಲಾರದು.


ಹತಾಶ ಮನುಷ್ಯನ ನಡೆಯನ್ನು ಊಹಿಸುವುದು ಎಷ್ಟು ಕಷ್ಟವೋ ಹತಾಶ ಪ್ರಭುತ್ವದ ನಡೆಯನ್ನು ಊಹಿಸುವುದು ಕೂಡ ಅಷ್ಟೇ ಕಷ್ಟ. ತಾನು ನೀಡಿದ ಆಶ್ವಾಸನೆಗಳನ್ನು ಈಡೇರಿಸಲಾಗದೆ ಮತದಾರರ ಒಲವನ್ನು ಕಳೆದುಕೊಳ್ಳುವ ಭಯ ಕಾಡತೊಡಗಿದಾಗ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಯಾವುದೇ ಒಂದು ಪ್ರಭುತ್ವ ಇನ್ನಷ್ಟು ಹೊಸ ಆಶ್ವಾಸನೆಗಳನ್ನು ನೀಡಿ ಮತದಾರರನ್ನು ಆಕರ್ಷಿಸಲು ಅಂತಿಮ ಪ್ರಯತ್ನ ನಡೆಸುವುದು ಸಹಜ. ಅಂತಹ ಒಂದು ಪ್ರಯತ್ನವಾಗಿ ಈಗ ದೇಶದ ಮುಂದೆ ‘ಮೇಲ್ಜಾತಿ ಬಡವರಿಗೆ ಮೀಸಲಾತಿ’ ಎಂಬ ಘೋಷಣೆಯಾಗಿದೆ. ಪರಿಣಾಮವಾಗಿ ದೇಶದ ಬಲಪಂಥೀಯ ರಾಜಕಾರಣದ ಬೆನ್ನೆಲುಬು ಎನ್ನಬಹುದಾದ ಮತ್ತು ಇಷ್ಟರವರೆಗೆ ಮೀಸಲಾತಿ ಎಂದಾಗ ಮೂಗು ಮುರಿಯುತ್ತಿದ್ದ ಬ್ರಾಹ್ಮಣ, ಜಾಟ್, ಠಾಕೂರ್, ರಜಪೂತ, ಮರಾಠಾ ಮೊದಲಾದ ಜಾತಿಗಳಿಗೆ ಸೇರಿದವರು ತಮಗೂ ಮೀಸಲಾತಿ ಮತ್ತು ಆ ಮೂಲಕ ತಮ್ಮ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಹಾಗೂ ಸರಕಾರಿ ನೌಕರಿ ಸಿಕ್ಕೇ ಬಿಟ್ಟಿತೆಂದು ಸಂಭ್ರಮಿಸತೊಡಗಿದ್ದಾರೆ. ಆದರೆ ಕಲ್ಪನೆಯ ಈ ಸಂಭ್ರಮ ಮತ್ತು ಕಠಿಣ ವಾಸ್ತವದ ವಿಭ್ರಮದ ನಡುವೆ ಸಾಗಬೇಕಾದ ದುರ್ಗಮ ಹಾದಿಯ ಅರಿವು ಇವರಲ್ಲಿ ಶೇ. 90 ಮಂದಿಗೆ ಇರಲಾರದು.

ಮೇಲ್ಜಾತಿಯ ಬಡವರಿಗೂ/ಸಾಮಾನ್ಯ ವರ್ಗಕ್ಕೆ ಮೀಸಲಾತಿ, ಸರ್ವ ಸಮಾನತೆಯ ನವಯುಗ, ಸಂವಿಧಾನ ಕರ್ತರ ಆಶಯದ ಅಂತಿಮ ಅಭಿವ್ಯಕ್ತಿ ಇತ್ಯಾದಿಯಾಗಿ ಉತ್ಪ್ರೇಕ್ಷೆಗಳಲ್ಲಿ ವರ್ಣಿಸಲಾಗುತ್ತಿರುವ ಮೀಸಲಾತಿಯ ಈ ಹೊಸ ದಾಳದ ಹಿಂದು ಮುಂದಿನ, ಸಂಭ್ರಮ-ವಿಭ್ರಮದ ಸುತ್ತ ಸ್ವಲ್ಪದೃಷ್ಟಿ ಹಾಯಿಸೋಣ.

* ಹೊಸ ಮೀಸಲಾತಿ ನಿಯಮಗಳ ಪ್ರಕಾರ ವಾರ್ಷಿಕ ಎಂಟು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ, ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ, ಒಂದು ಸಾವಿರ ಚದರ ಅಡಿಗಿಂತ ಕಡಿಮೆ ಅಳತೆಯ ಮನೆ ಮತ್ತು ನೂರು ಯಾರ್ಡ್ ಗಿಂತ ಕಡಿಮೆ ಅಳತೆಯ ವಸತಿ ನಿವೇಶನ ಹೊಂದಿರುವವರು ಈ ಮೀಸಲಾತಿ ಪಡೆಯಲು ಅರ್ಹರು.

* ಈಗಿನ ಆದಾಯ ತೆರಿಗೆ ನಿಯಮಾವಳಿಗಳ ಪ್ರಕಾರ ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯುವ ಯಾವನೇ ವ್ಯಕ್ತಿ ಸರಕಾರಕ್ಕೆ ಆದಾಯ ತೆರಿಗೆ ಕಟ್ಟಲು ಬದ್ಧನಾಗುತ್ತಾನೆ. ಹೊಸ ಮೀಸಲಾತಿ ನಿಯಮದ ಪ್ರಕಾರ ಮಾಸಿಕ ಸುಮಾರು 66,000 ರೂ. ಅಥವಾ ವಾರ್ಷಿಕ 7,92,000 ರೂ. ಅಥವಾ ಆದಾಯ ತೆರಿಗೆ ಮಿತಿಗಿಂತ ಮೂರು ಪಟ್ಟಿಗೂ ಹೆಚ್ಚು ಆದಾಯ ಹೊಂದಿರುವ ಮೇಲ್ಜಾತಿಯ ‘ಬಡವ’ ಆರ್ಥಿಕವಾಗಿ ಹಿಂದುಳಿವನೆಂದು ಪರಿಗಣಿಸಲ್ಪಟ್ಟು ಮೀಸಲಾತಿಗೆ ಅರ್ಹನಾಗುತ್ತಾನೆ!. ಹಾಗಾದರೆ ವಾರ್ಷಿಕ ಸುಮಾರು 50ರಿಂದ 70 ಸಾವಿರ ರೂಪಾಯಿ ಆದಾಯ ತೆರಿಗೆ ಪಾವತಿಸುವ ಇಂತಹ ಜನ ‘ಬಡವರು’ ಎಂದು ಪರಿಗಣಿಸಲ್ಪಟ್ಟು ಮೀಸಲಾತಿಗೆ ಅರ್ಹರಾಗುತ್ತಾರೆ.

* ‘ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ’ ಎನ್ನುವಾಗ ಅದು ಸತತ ಬರಗಾಲ ಪೀಡಿತ ಪ್ರದೇಶದ ಐದು ಎಕರೆಯೋ ಅಥವಾ ನೀರಾವರಿ ಸೌಲಭ್ಯವಿರುವ ಪ್ರದೇಶದ ಐದು ಎಕರೆಯೋ? ಬರಪೀಡಿತ ಪ್ರದೇಶದ ಐದು ಎಕರೆ ಬರಡು ಕೃಷಿ ಭೂಮಿಯ ಒಡೆಯ ಬಡವನೂ, ಹೇರಳ ನೀರಾವರಿ ಸವಲತ್ತು ಇರುವ ಐದು ಎಕರೆ ಕೃಷಿ ಭೂಮಿಯ ಒಡೆಯ ಸಾಕಷ್ಟು ಶ್ರೀಮಂತನೂ ಆಗಿರುತ್ತಾನಲ್ಲವೇ?

* ಈವರೆಗೆ ಇರುವ ಶೇ. 50 ಕಕ್ಷೆಯಡಿ ಮೀಸಲಾತಿ ಪಡೆಯುವ ‘ಆರ್ಥಿಕವಾಗಿ ಹಿಂದುಳಿದವರಿಗೆ’ ಈಗ ಇರುವ ಆದಾಯ ಮಿತಿಯನ್ನು ವಾರ್ಷಿಕ ಎಂಟು ಲಕ್ಷಕ್ಕೆ ಏರಿಸದೆ ಹೋದಲ್ಲಿ ಅವರ ಪಾಡೇನು? * ಇತರ ಹಿಂದುಳಿದ ವರ್ಗಗಳಿಗೆ ಅವರು ‘ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು’ ಎಂಬ ನೆಲೆಯಲ್ಲಿ ಮೀಸಲಾತಿ ನೀಡಲಾಗಿತ್ತಲ್ಲದೆ ಆರ್ಥಿಕವಾಗಿ ಹಿಂದುಳಿದವರು ಎಂಬ ನೆಲೆಯಲ್ಲಿ ಅಲ್ಲ ಎಂಬುದು ಕೂಡ ಗಮನಿಸಬೇಕಾದ ಅಂಶವಲ್ಲವೇ? ಯಾಕೆಂದರೆ 1991ರಲ್ಲಿ ಪಿ. ವಿ. ನರಸಿಂಹರಾಯರ ಕಾಂಗ್ರೆಸ್ ಸರಕಾರ ಆರ್ಥಿಕ ಮಾನದಂಡದ ನೆಲೆಯಲ್ಲಿ ಮೀಸಲಾತಿ ನೀಡಲು ಪ್ರಯತ್ನಿಸಿದಾಗ ಸುಪ್ರೀಂ ಕೋರ್ಟ್ ಅದಕ್ಕೆ ಸಮ್ಮತಿಸಲಿಲ್ಲ ಎಂಬುದನ್ನು ಮರೆಯಲಾದೀತೇ?

* ಸುಪ್ರೀಂಕೋರ್ಟ್ ಮೀಸಲಾತಿ ಶೇ. 50 ಮಿತಿಯನ್ನು ಮೀರಬಾರದೆಂದು ಆದೇಶಿಸಿರುವಾಗ ಈ ಆದೇಶವನ್ನು ಮೀರಿ ಮೇಲ್ಜಾತಿಗಳಿಗೆ ಶೇ. 10 ಮೀಸಲಾತಿ ನೀಡಬೇಕಾದರೆ ಸಂವಿಧಾನಕ್ಕೆ ಒಂದು ತಿದ್ದುಪಡಿ ಮಸೂದೆ ತರಬೇಕು. ಅದಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬೆಂಬಲ ದೊರೆಯಬೇಕು ಮತ್ತು ದೇಶದ ಒಟ್ಟು ರಾಜ್ಯಗಳಲ್ಲಿ ಶೇ. 50 ರಾಜ್ಯಗಳ ಅನುಮೋದನೆ ದೊರೆಯಬೇಕು. ಈ ಎಲ್ಲ ‘ಬೇಕು’ಗಳು ಹಿಡಿಯಲು ಸಾಕಷ್ಟು ಕಾಲಾವಕಾಶ ಬೇಕು. ಅಷ್ಟರೊಳಗಾಗಿ ಈಗ ಅಧಿಕಾರದಲ್ಲಿರುವ ಸರಕಾರ ಬದಲಾಗಿ ಹೊಸ ಸರಕಾರ ಅಧಿಕಾರಕ್ಕೆ ಬರುತ್ತದೆ.

* ಈಗಾಗಲೇ ಹೇಳಲಾಗಿರುವಂತೆ ಎಂಟು ಲಕ್ಷ ವಾರ್ಷಿಕ ಆದಾಯ ನೀತಿಯನ್ನು ಉಳಿಸಿಕೊಂಡಲ್ಲಿ ಶೇ. 95 ಭಾರತೀಯರು ಹೊಸ ಮೀಸಲಾತಿ ಕೋಟಾ ಪಡೆಯಲು ಅರ್ಹರಾಗುತ್ತಾರೆ!. ಇದೇ ವೇಳೆ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ’ಯ ಲೆಕ್ಕಾಚಾರದಂತೆ ಕಳೆದ ಒಂದು ವರ್ಷದಲ್ಲಿ ಒಂದು ಕೋಟಿ ಹತ್ತು ಲಕ್ಷ ಉದ್ಯೋಗಗಳು ನಷ್ಟವಾಗಿವೆ.

2014ರ ಲೋಕಸಭಾ ಚುನಾವಣೆಯ ಮೊದಲು ನೀಡಲಾಗಿದ್ದ ಚುನಾವಣಾ ಆಶ್ವಾಸನೆಯಂತೆ ವಾರ್ಷಿಕ ಎರಡು ಕೋಟಿ ಉದ್ಯೋಗಗಳ ಸೃಷ್ಟಿಯಾಗಿದ್ದಲ್ಲಿ ಇಷ್ಟರಲ್ಲಿ ಒಂಬತ್ತು ಕೋಟಿ ಉದ್ಯೋಗಗಳು ಲಭ್ಯವಿರಬೇಕಾಗಿತ್ತು. ಇದಕ್ಕೆ ಬದಲಾಗಿ ಎಲ್ಲ ಸಮೀಕ್ಷೆಗಳೂ ಲಕ್ಷಗಟ್ಟಲೆ ಉದ್ಯೋಗ ನಷ್ಟವಾಗಿರುವುದನ್ನು ಹೇಳುತ್ತವೆ. ಉದ್ಯೋಗಗಳೇ ಸೃಷ್ಟಿಯಾಗದಿರುವಾಗ ಮೀಸಲಾತಿಯ ಶೇಕಡಾವಾರು ಮಾತ್ರ ಹೆಚ್ಚುತ್ತಾ ಹೋದರೆ ಯಾರಿಗೆ ಏನು ಪ್ರಯೋಜನ?

* ಮೇಲ್ಜಾತಿಗಳ ಬಡವರಿಗೆ ನಿಜವಾಗಿಯೂ ಮೀಸಲಾತಿ ಸವಲತ್ತು ಸಿಗಬೇಕಾದರೆ ಈ ಜಾತಿಗಳಲ್ಲಿರುವ ವಾಹನ ಚಾಲಕರು, ರಿಕ್ಷಾ ಚಾಲಕರು, ಹೋಟೆಲ್, ಅಂಗಡಿ, ಗಾರ್ಮೆಂಟ್‌ಫ್ಯಾಕ್ಟರಿಗಳಂಥ ಫ್ಯಾಕ್ಟರಿಗಳಲ್ಲಿ, ಸಣ್ಣಪುಟ್ಟ ಉದ್ಯಮಗಳಲ್ಲಿ ದುಡಿಯುವ ಲಕ್ಷಾಂತರ ಮಂದಿಯ ವಾರ್ಷಿಕ ಆದಾಯವನ್ನು ಪರಿಗಣಿಸಿ ಮೀಸಲಾತಿ ನೀಡಬೇಕು. ಇಂತಹ ದುಡಿಮೆ ಮಾಡುವವರ ವಾರ್ಷಿಕ ಆದಾಯ ಒಂದೂವರೆ ಲಕ್ಷದಿಂದ ಎರಡು ಅಥವಾ ಎರಡೂವರೆ ಲಕ್ಷ ರೂಪಾಯಿ ಮೀರುವುದಿಲ್ಲ. ವಾರ್ಷಿಕ ಎಂಟು ಲಕ್ಷ ರೂಪಾಯಿ ಆದಾಯವಿರುವವರು ಮೀಸಲಾತಿಗೆ ಅರ್ಹರಾದಲ್ಲಿ ಆಗ ಮೇಲ್ಜಾತಿಗಳ ಆರ್ಥಿಕ ಬಲಾಢ್ಯರ ಜೊತೆ ಮೇಲ್ಜಾತಿಗಳ ನಿಜವಾದ ಬಡವರು ಸ್ಪರ್ಧಿಸಿ ಮೀಸಲಾತಿ ಹೋರಾಟದಲ್ಲಿ ಯಶಸ್ವಿಯಾಗಬೇಕಾಗುತ್ತದೆ. ಇದು ಪುನಃ ಬಲಿಷ್ಠರ ಮುಂದೆ ದುರ್ಬಲರು ನಡೆಸುವ ಕಾದಾಟವಾಗುತ್ತದೆ

* ಇಂತಹ ಕಾದಾಟದಲ್ಲಿ ಮತ್ತೆ ಪುನಃ ರ್ಯಾಂಕ್‌ಗಳು, ಅಂಕಗಳು, ಪ್ರತಿಶತಗಳು ನಿರ್ಣಾಯಕವಾಗುತ್ತವೆ. ಯಾಕೆಂದರೆ ಈಗಾಗಲೇ ಮೀಸಲಾತಿ ಕೋಟದಲ್ಲಿರುವ ಒಟ್ಟು ಉದ್ಯೋಗಿಗಳ ಹತ್ತಾರು ಪಟ್ಟು ಅಭ್ಯರ್ಥಿಗಳು ಉದ್ಯೋಗಾಕಾಂಕ್ಷಿಗಳು ಇದ್ದಾರೆ. ಇವರಲ್ಲಿ ತೀವ್ರ ಸ್ಪರ್ಧೆ ನಡೆದು ಅಂತಿಮವಾಗಿ ಬೆರಳೆಣಿಕೆಯಷ್ಟು ಮಂದಿಗೆ ಉದ್ಯೋಗ ದೊರಕುತ್ತದೆ. ಇಷ್ಟಕ್ಕೂ ಸರಕಾರಿ ರಂಗದಲ್ಲಿ ಲಭ್ಯ ಇರುವ ನೌಕರಿಗಳು ದೇಶದ ಒಟ್ಟು ನೌಕರಿಗಳ ಶೇ. 10ರಷ್ಟೂ ಕೂಡ ಇಲ್ಲ. ಉಳಿದ ಶೇ. 90 ಶಿಕ್ಷಣಾವಕಾಶಗಳು, ಉದ್ಯೋಗಗಳಿರುವುದು ಖಾಸಗಿ ರಂಗದಲ್ಲಿ. ಖಾಸಗಿ ರಂಗಗಳಲ್ಲಿ ಜಾತಿ, ಒಳಪಂಗಡ, ಧರ್ಮ, ಒಳಜಾತಿಗಳೇ ಆಯ್ಕೆಯ ಮಾನದಂಡವಾಗಿರುತ್ತದೆ.

ಬಹುಪಾಲು ಶಿಕ್ಷಣ ಸಂಸ್ಥೆಗಳು ನಿರ್ದಿಷ್ಟ ಜಾತಿ/ಧರ್ಮ/ಸಮುದಾಯಗಳ ವ್ಯಕ್ತಿಗಳು ನಡೆಸುವ ಸಂಸ್ಥೆಗಳಾಗಿರುತ್ತವೆ. ಅಲ್ಲಲ್ಲಿ ‘ಸ್ವಜಾತಿ/ಸ್ವಧರ್ಮ’ ಬಾಂಧವರಿಗೇ ಸೀಟುಗಳು, ಉದ್ಯೋಗಗಳು ಮೀಸಲಾಗಿರುತ್ತಾ, ಒಂದು ರೀತಿಯ ಪರೋಕ್ಷ ಮೀಸಲಾತಿ ಕೆಲಸ ಮಾಡುತ್ತಿರುತ್ತದೆ. ಹಾಗಾದರೆ, ಮೇಲ್ಜಾತಿಗಳು ತಮಗೂ ಮೀಸಲಾತಿ ಸಿಗಲಿದೆ ಎಂದು ಸಂಭ್ರಮಿಸುವುದು ಮತದಾರರನ್ನು ಹಾದಿತಪ್ಪಿಸುವ ಸಂಭ್ರಮವಾಗಲಾರದೇ?. ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಎಂಬುದು ನಿಜವಾಗಿಯೂ ಕೆನೆ ಪದರಕ್ಕೆ ಪ್ರಭುತ್ವ ತನ್ನ ಅಧಿಕಾರಾವಧಿಯ ಅಂತ್ಯದಲ್ಲಿ ಒಡ್ಡುತ್ತಿರುವ ಕೊನೆಯ ‘ಕ್ರಾಂತಿಕಾರಿ’ ಆಮಿಷವಲ್ಲವೇ ?


(bhaskarrao599@gmail.com)

share
ಡಾ. ಬಿ. ಭಾಸ್ಕರ ರಾವ್
ಡಾ. ಬಿ. ಭಾಸ್ಕರ ರಾವ್
Next Story
X