ಇಂದಿನ ಅವಶ್ಯಕವಾಗಿರುವ ನಾಡುನುಡಿಗೆ ಆದ್ಯತೆ ನೀಡಿ: ಶೀಲಾ ಶೆಟ್ಟಿ

ಉಡುಪಿ, ಜ.12: ನಾಡು ನುಡಿ ಇಂದಿನ ಅವಶ್ಯಕವಾಗಿದ್ದು, ಯುವಜನತೆ ನಮ್ಮ ನಾಡು ಮತ್ತು ಭಾಷೆಗೆ ಆದ್ಯತೆ ನೀಡಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಸಂಚಲನ ಟ್ರಸ್ಟ್, ಯುವಜನ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ರೆಡ್‌ಕ್ರಾಸ್, ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಕಾರದೊಂದಿಗೆ ಶನಿವಾರ ಉಡುಪಿ ಶ್ರೀಕೃಷ್ಣ ಮಠದ ಮಧ್ವಂಗಣದಲ್ಲಿ ಆಯೋಜಿಸಲಾದ ಸ್ವಾಮಿ ವಿವೇಕಾ ನಂದರ 156ನೆ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಉಡುಪಿ ಉದ್ಯೋಗ ಮೇಳ ಅಭ್ಯರ್ಥಿಗಳ ತರಬೇತಿ ಹಾಗೂ ಸ್ವಉದ್ಯೋಗ ಮತ್ತು ಉದ್ಯಮಶೀಲತೆ ಕೇಂದ್ರವನ್ನು ಉದಾ್ಘಟಿಸಿ ಅವರು ಮಾತ ನಾಡುತಿದ್ದರು.
ಸ್ವಉದ್ಯೋಗ ಮತ್ತು ಉದ್ಯಮಶೀಲತೆ ಕೇಂದ್ರವು ದೇಶದ ಬಹಳ ದೊಡ್ಡ ಸಮಸ್ಯೆಯಾಗಿರುವ ನಿರುದ್ಯೋಗಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ ಎಂದ ಅವರು, ಪ್ರತಿಯೊಬ್ಬರಲ್ಲಿ ಅಪೂರ್ವ ವ್ಯಕ್ತಿತ್ವ ಅಡಗಿದೆ. ನಿಮ್ಮ ವ್ಯಕ್ತಿತ್ವವನ್ನು ನೀವು ತಿಳಿದುಕೊಳ್ಳಿ ಎಂಬುದು ವಿವೇಕಾನಂದರ ಪ್ರಮುಖ ವಾಣಿ ಯಾಗಿದೆ. ಆದುದರಿಂದ ನಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್, ರೆಡ್‌ಕ್ರಾಸ್ ಉಡುಪಿ ಘಟಕದ ಅಧ್ಯಕ್ಷ ಡಾ.ಉಮೇಶ್ ಪ್ರಭು, ಕಾಪು ಪುರಸಭೆ ಮುಖ್ಯಾ ಧಿಕಾರಿ ರಾಯಪ್ಪ ಉಪಸ್ಥಿತರಿದ್ದರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಅಧ್ಯಕ್ಷತೆಯನ್ನು ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ವಹಿಸಿದ್ದರು. ಸಂಚಾಲನ ಟ್ರಸ್ಟ್ ಸಂಚಾಲಕ ಪ್ರೇಮ್ ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ದರು. ವಿಜೇ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







