ಬಿಲ್ಲವ ಮಹಾ ಸಮಾವೇಶಕ್ಕೆ ಮುಖ್ಯಮಂತ್ರಿಗೆ ಆಹ್ವಾನ

ಉಡುಪಿ, ಜ.12: ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಫೆ. 3ರಂದು ನಡೆ ಯುವ ಬಿಲ್ಲವ ಮಹಾ ಸಮಾವೇಶವನ್ನು ಉದ್ಘಾಟಿಸಲಿರುವ ರಾಜ್ಯದ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಅವರ ಬೆಂಗಳೂರಿನ ವಿಧಾನ ಸೌಧದ ಕಚೇರಿಯಲ್ಲಿ ಬಿಲ್ಲವ ಮಹಾ ಸಮಾವೇಶದ ಸಮಿತಿ ವತಿಯಿಂದ ಆಮಂತ್ರಣ ಪತ್ರಿಕೆ ನೀಡಿ ಅಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ, ಬಿಲ್ಲವ ಮಹಾ ಸಮಾವೇಶದ ಸಮಿತಿ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಅಶೋಕ ಪೂಜಾರಿ ಹಾರಾಡಿ, ಸಂಚಾಲಕ ರಾಜು ಪೂಜಾರಿ ಉಪ್ಪೂರು, ಸ್ವಾಗತ ಸಮಿತಿ ಸದಸ್ಯ ಅಲೆ ಭಾಸ್ಕರ ಪೂಜಾರಿ, ಪ್ರವೀಣ್ ಪೂಜಾರಿ ಬೆಂಗಳೂರು, ವಾಸುದೇವ ಪೂಜಾರಿ ಬೆಂಗಳೂರು, ಕೃಷ್ಣ ಪೂಜಾರಿ ಅಮವಾಸೆಬೈಲು ಉಪಸ್ಥಿತರಿದ್ದರು.
Next Story





