ಜ.13ರಂದು ಬಂಟವಾಳ ತಾಲೂಕಿನ ವಾರ್ಷಿಕೋತ್ಸವ
ಬಂಟ್ವಾಳ, ಜ. 12: ಬಂಟರ ಸಂಘ, ಬಂಟವಾಳ ತಾಲೂಕಿನ ವಾರ್ಷಿಕೋತ್ಸವ ಕಾರ್ಯಕ್ರಮ ಜ.13ರಂದು ತುಂಬೆ ವಳವೂರಿನಲ್ಲಿರುವ ಬಂಟವಾಳದ ಬಂಟರ ಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ತಿಳಿಸಿದ್ದಾರೆ.
ಬೆಳಗ್ಗೆ 10ರಿಂದ ಬಂಟೆರೆ ಕಲಾ ಪಂಥ ನಡೆಯಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಪ್ರಸಿದ್ಧ ಯಕ್ಷಗಾನ ಭಾಗವತ ಪಟ್ಲ ಸತೀಶ ಶೆಟ್ಟಿ ಮಾರ್ಗದರ್ಶನ ನೀಡಲಿದ್ದಾರೆ. ಇದರಲ್ಲಿ ಕಾವೂರು, ಪುತ್ತೂರು, ಕಾರ್ಕಳ, ಜಪ್ಪು, ಸುರತ್ಕಲ್, ಗುರುಪುರ, ಸುಳ್ಯ, ಉಳ್ಳಾಲ, ಕಾಸರಗೋಡು, ನೀರುಮಾರ್ಗ ಮತ್ತು ಪಡುಬಿದಿರೆ ಬಂಟರ ಸಂಘದ ತಂಡಗಳು ಭಾಗವಹಿಸಲಿವೆ.
ಬಂಟರ ಸಂಘ ಬಂಟವಾಳ ತಾಲೂಕು ಸದಸ್ಯರಿಂದ ಭಾರತ ದರ್ಶನ ಮತ್ತು ಜರ್ನಿ ಆಫ್ ಇಂಡಿಯನ್ ಸಿನಿಮಾಸ್ ಎಂಬ ಕಾರ್ಯಕ್ರಮ ಪ್ರಮೋದ್ ಆಳ್ವ ಮತ್ತು ಋಗ್ವೇದ್ ಬೇಂದ್ರೆ ಮಾರ್ಗದರ್ಶನದಲ್ಲಿ ನಡೆಯಲಿವೆ. ಸಂಜೆ 5:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗ್ರಿಗುತ್ತು ವಿವೇಕ್ ಶೆಟ್ಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಕೆ.ಪ್ರಕಾಶ ಶೆಟ್ಟಿ ಮತ್ತು ರತ್ನಾಕರ ಶೆಟ್ಟಿ ಮುಂಡ್ಕೂರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





