ಭೂವಿವಾದದಲ್ಲಿ ವ್ಯಕ್ತಿಗೆ ಥಳಿಸಿದ ಬಿಹಾರದ ಆರ್ ಜೆಡಿ ಶಾಸಕ
(ಬಿಹಾರ),ಜ.12: ಭೂವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆರ್‌ಜೆಡಿ ಶಾಸಕ ಪ್ರಹ್ಲಾದ ಯಾದವ ಅವರು ವ್ಯಕ್ತಿಯೋರ್ವನಿಗೆ ಕಪಾಳಮೋಕ್ಷ ಮಾಡಿದ ಘಟನೆಯು ಶುಕ್ರವಾರ ಸೂರ್ಯಗಡದಲ್ಲಿ ನಡೆದಿದ್ದು, ಈ ದೃಶ್ಯವಿರುವ ವೀಡಿಯೊವೊಂದು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.
ವ್ಯಕ್ತಿ ತನಗೆ ಸೇರಿದ ಸ್ಥಳದಲ್ಲಿ ಆವರಣ ಗೋಡೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದ್ದು,ವ್ಯಕ್ತಿಗೆ ತಪರಾಕಿ ನೀಡುವ ಮುನ್ನ ಶಾಸಕರು ಆತನನ್ನು ನಿಂದಿಸಿರುವ ದೃಶ್ಯವೂ ವೀಡಿಯೊದಲ್ಲಿದೆ.
ಏಟು ತಿಂದ ವ್ಯಕ್ತಿ ಶಾಸಕರ ವಿರುದ್ಧ ದೂರನ್ನು ಸಲ್ಲಿಸಿದ್ದಾನೆ. ತನಿಖೆೆಯ ಬಳಿಕ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story