ಶಬರಿಮಲೆ ಮಹಿಳಾ ಪ್ರವೇಶ ವಿರೋಧಿಸಿದ್ದ ಬಿಜೆಪಿ ಮುಖಂಡನ ಮೇಲೆ ಕಾಡು ಹಂದಿ ದಾಳಿ
ಸಾಂದರ್ಭಿಕ ಚಿತ್ರ
ಶಬರಿಮಲೆ, ಜ. 13: ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ಅಯ್ಯಪ್ಪ ಕರ್ಮ ಸಮಿತಿ ಮುಖಂಡನ ಮೇಲೆ ಕಾಡು ಹಂದಿಗಳು ದಾಳಿ ಮಾಡಿವೆ. ಇದರಿಂದಾಗಿ ಮುಖಂಡ ಪವಿತ್ರ ಮಂದಿರಕ್ಕೆ ಕೈಗೊಂಡಿದ್ದ ಯಾತ್ರೆಯನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾಯಿತು.
ಬಿಜೆಪಿ ಪಾಲಿಕೆ ಸದಸ್ಯರೂ ಆಗಿರುವ ವಿ.ಹರಿಕುಮಾರ್ ಮೇಲೆ ಮುಂಜಾನೆ ಕಾಡು ಹಂದಿಗಳು ದಾಳಿ ಮಾಡಿವೆ.
ಅಯ್ಯಪ್ಪ ದರ್ಶನಕ್ಕೆ ಹರಿಕುಮಾರ್ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಹರಿಕುಮಾರ್ ಅವರ ಬಲ ಮೊಣಗಾಲಿಗೆ ತೀವ್ರ ಕಡಿತದ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಣಗಾಲಿಗೆ ಆದ ತೀವ್ರ ಗಾಯದಿಂದಾಗಿ ಬೆಟ್ಟ ಹತ್ತಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅಯ್ಯಪ್ಪ ದರ್ಶನವಿಲ್ಲದೇ ಯಾತ್ರೆ ಮೊಟಕುಗೊಳಿಸಬೇಕಾಯಿತು.
ಬಿಜೆಪಿ, ಆರೆಸ್ಸೆಸ್ ಹಾಗೂ ಪಂದಳಂ ರಾಜಮನೆತನದ ಬೆಂಬಲದೊಂದಿಗೆ ಕೆಲ ಹಿಂದುತ್ವ ಸಂಘಟನೆಗಳು ಶಬರಿಮಲೆ ಕರ್ಮ ಸಮಿತಿ ರಚಿಸಿಕೊಂಡು, ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದರ್ಶನಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಹೋರಾಟ ನಡೆಸುತ್ತಿದ್ದವು.