ಚೀನಾದಲ್ಲಿ ಗಣಿ ದುರಂತ: ಮೃತರ ಸಂಖ್ಯೆ 21ಕ್ಕೇರಿಕೆ
ಬೀಜಿಂಗ್, ಜ.13: ಉತ್ತರ ಚೀನಾದಲ್ಲಿ ಶನಿವಾರ ಕಲ್ಲಿದ್ದಲು ಗಣಿ ಮೇಲ್ಛಾವಣೆ ಕುಸಿತಗೊಂಡಿರುವ ಘಟನೆ ಸಂಬಂದಿಸಿ ಮೃತಪಟ್ಟವರ ಸಂಖ್ಯೆ 21ಕ್ಕೇರಿದೆ. ಶನಿವಾರ ಮಧ್ಯಾಹ್ನ ಶಾನ್ಕ್ಸಿ ಪ್ರೊವಿನ್ಸ್ ಮೈನ್ನಲ್ಲಿ ತಳ ಮಾಳಿಗೆಯಲ್ಲಿ ಒಟ್ಟು 87 ಮಂದಿ ಕೆಲಸ ಮಾಡುತ್ತಿದ್ದರು ಎಂದು ಸುದ್ದಿ ಏಜೆನ್ಸಿ ವರದಿ ಮಾಡಿದೆ.
ರಕ್ಷಣಾ ಕಾರ್ಯಕಡೆ ರವಿವಾರ ಇನ್ನೆರಡು ಗಣಿ ಪತ್ತೆ ಮಾಡಿದ್ದರಿಂದ ಮೃತರ ಸಂಖ್ಯೆ ಏರಿಕೆಯಾಗಿದೆ. ಉಳಿದೆರಡು ಗಣಿಯೊಳಗೆ ಸಿಲುಕಿರುವವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. 66 ಮಂದಿಯನ್ನು ಸುರಕ್ಷಿತವಾಗಿ ಗಣಿಯಿಂದ ತೆರವುಗೊಳಿಸಲಾಗಿದೆ.
ಘಟನೆಗೆ ಕಾರಣವಾದ ಗಣಿಯನ್ನು ಖಾಸಗಿ ಕಂಪೆನಿಯೊಂದು ನಡೆಸುತ್ತಿದ್ದು, ಅದನ್ನು ತನಿಖೆಗೆ ಒಳಪಡಿಸಲಾಗಿದೆ.
Next Story