ಬಿಜೆಪಿ ಮುಖಂಡರು ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಸೇರಲು ಉತ್ಸುಕರಾಗಿದ್ದಾರೆ: ಅಖಿಲೇಶ್
ಲಕ್ನೊ, ಜ.13: ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ನಡುವಿನ ಮೈತ್ರಿಕೂಟವನ್ನು ಸೇರಲು ಉತ್ತರಪ್ರದೇಶದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ. ಬಿಎಸ್ಪಿ-ಎಸ್ಪಿ ಮೈತ್ರಿಕೂಟ ರಚನೆಯಾಗಿರುವುದು ಬಿಜೆಪಿಯ ಉನ್ನತ ನಾಯಕರು ಹಾಗೂ ಇಡೀ ಸಂಘಟನೆಯಲ್ಲಿ ನಿರಾಶೆಯ ಭಾವನೆ ಮೂಡಿಸಿದೆ. ಈಗ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರು ‘ನನ್ನ ಬೂತ್ ನುಚ್ಚುನೂರಾಗಿ ಹೋಯಿತು’ ಎನ್ನುತ್ತಿದ್ದಾರೆ. ಇಂತಹ ಸ್ಥೈರ್ಯಗೆಟ್ಟಿರುವ ಮತ್ತು ಹತಾಶ ಕಾರ್ಯಕರ್ತರು ಮತ್ತು ಮುಖಂಡರು ಇದೀಗ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳಲು ಕಾತರರಾಗಿದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ.
Next Story