Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ14 Jan 2019 12:15 AM IST
share
ಓ ಮೆಣಸೇ..

ಇಂಗ್ಲಿಷ್ ಕೇವಲ ಶ್ರೀಮಂತರು ಮತ್ತು ನಗರವಾಸಿಗಳ ಸ್ವತ್ತಾಗಬಾರದು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಮೇಲ್ಜಾತಿಯ ಬಡವರಿಗೆ ಅದರಲ್ಲೂ ಇನ್ನಷ್ಟು ಮೀಸಲಾತಿ ನೀಡಿದರೆ ಹೇಗೆ?

---------------------

ನಾನು ಎಡವೂ ಹೌದು, ಬಲವೂ ಹೌದು - ಚಂದ್ರಶೇಖರ ಕಂಬಾರ, ಸಾಹಿತಿ
ಎಡ ಮತ್ತು ಬಲ ಒಟ್ಟು ಸೇರಿದರೆ ಎಡಬಿಡಂಗಿಯಾಗಿ ಬಿಡುತ್ತದೆ.

---------------------

ಕೇಂದ್ರ ಸರಕಾರದಲ್ಲಿಯ ಏಕಶಕ್ತಿ ಪ್ರದರ್ಶನವೇ ಬಿಜೆಪಿ ಹಡಗು ಮುಳುಗಲು ಕಾರಣ - ಶಶಿತರೂರ್, ಸಂಸದ
ಕಾಂಗ್ರೆಸ್ ಹಡಗು ಮುಳುಗಿದ್ದಕ್ಕೂ ಕಾರಣ ಹುಡುಕಿ.
---------------------
 
ರಕ್ಷಣಾ ಒಪ್ಪಂದಗಳ ಬಗ್ಗೆ ರಾಹುಲ್‌ ಗಾಂಧಿಗೆ ಎಬಿಸಿಡಿ ಕೂಡಾ ಗೊತ್ತಿಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ತನಿಖೆ ಮಾಡಿದರೆ ಹಲವು ನಾಯಕರು ಜೈಲಿನಲ್ಲಿ ಎಬಿಸಿಡಿ ಎಣಿಸುತ್ತಾ ಕೂರಬಹುದು.

---------------------

ಕಾಂಗ್ರೆಸ್‌ನಂತಹ ಬಲಹೀನ ಶಕ್ತಿಗಳ ಜೊತೆ ಹೊಂದಾಣಿಕೆ ಅಗತ್ಯವಿಲ್ಲ - ಕಿರಣ್ಮಯ್ ನಂದಾ,ಎಸ್ಪಿ ರಾಷ್ಟ್ರೀಯ ಉಪಾಧ್ಯಕ್ಷ
ಅಂದರೆ ಸಂದರ್ಭ ಬಂದಾಗ ಬಿಜೆಪಿ ಜೊತೆಗೆ ಹೊಂದಾಣಿಕೆ ನಡೆಯಬಹುದು.

---------------------

ನಮ್ಮ ಮಾತು ಕೇಳದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ(ಕಾಂಗ್ರೆಸ್) ದಾರಿ ನಿಮಗೆ - ಎಚ್.ಡಿ.ರೇವಣ್ಣ, ಸಚಿವ
ಒಟ್ಟಿನಲ್ಲಿ ದಾರಿ ತಪ್ಪಿದ ಮಗ.

---------------------
ಐಟಿ ದಾಳಿಗೆ ಹೆದರುವ ಪ್ರಶ್ನೆಯೇ ಇಲ್ಲ - ಪುನೀತ್‌ರಾಜ್‌ಕುಮಾರ್, ನಟ
ಐಟಿ ಅಧಿಕಾರಿಗಳೇ ಹೆದರಿದ ವದಂತಿಗಳಿವೆ.

---------------------
ಟಿಕೆಟ್ ಸಿಕ್ಕಿದರೆ ಮುಂಬರುವ ಲೋಕಸಭೆಗೆ ಸ್ಪರ್ಧಿಸುತ್ತೇನೆ - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ಪ್ರಭಾಕರ ಭಟ್ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿ ನೋಡಿ.

---------------------

ನಿಗಮ ಮಂಡಳಿ ವಿಷಯದಲ್ಲಿ ಬೀದಿರಂಪ ಬೇಡ - ದಿನೇಶ್‌ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ರಂಪವೇನಿದ್ದರೂ ಮನೆಯೊಳಗೆ ಮಾಡಿ ಎಂಬ ಸಂದೇಶ.

---------------------
 ಪ್ರತಿಪಕ್ಷಗಳು ಕೂಡಾ ಸರಕಾರದ ಭಾಗ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ವಿ.ಪಕ್ಷ ನಾಯಕ
ಅಂದರೆ ಭ್ರಷ್ಟಾಚಾರದಲ್ಲಿ ನಿಮಗೂ ಒಂದು ಪಾಲು ಎಂಬ ಕೋರಿಕೆಯೇ?
---------------------
 ಸಂಸ್ಕೃತ ಭಾಷೆ ಭಾರತವು ಜಗತ್ತಿಗೆ ಕೊಟ್ಟ ಕೊಡುಗೆ - ಅನಂತಕುಮಾರ್ ಹೆಗಡೆ, ಕೇಂದ್ರಸಚಿವ
ನೀವು ಸಾರ್ವಜನಿಕವಾಗಿ ಆಡುತ್ತಿರುವ ಭಾಷೆ ಸಂಸ್ಕೃತವೆನ್ನುವುದು ವಿಶ್ವ ನಂಬಿದೆ.
---------------------
ಎರಡು ಅಣ್ವಸ್ತ್ರ ರಾಷ್ಟ್ರ (ಭಾರತ -ಪಾಕ್)ಗಳು ಯುದ್ಧಕ್ಕೆ ಹೋಗುವುದು ಆತ್ಮಹತ್ಯೆಗೆ ಸಮ - ಇಮ್ರಾನ್‌ಖಾನ್, ಪಾಕ್ ಪ್ರಧಾನಿ
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿಯೇ ತಾನೆ ಅಣ್ವಸ್ತ್ರ ಸಂಗ್ರಹಿಸಿಟ್ಟುಕೊಂಡಿರುವುದು.

---------------------
ದುರಾಡಳಿತ ಸರಕಾರವನ್ನು ಪತನ ಮಾಡುವ ಶಕ್ತಿ ಸಾಹಿತಿಗಳಿಗಿದೆ -ಕುಂ.ವೀರಭದ್ರಪ್ಪ, ಸಾಹಿತಿ
ಒಂದು ಪ್ರಶಸ್ತಿ ಸಾಕು, ಸಾಹಿತಿಗಳನ್ನು ಪತನ ಮಾಡಲು.

---------------------

ಇಡಿ ದಾಳಿಯ ಹೆಸರಿನಲ್ಲಿ ಕೆಲವರು ನಮಗೆ ತೊಂದರೆ ನೀಡಿ ಸಂತೋಷ ಪಡುತ್ತಿದ್ದಾರೆ - ಡಿ.ಕೆ.ಶಿವಕುಮಾರ್, ಸಚಿವ
ಕಾಂಗ್ರೆಸ್‌ನೊಳಗೂ ಆ ಸಂತೋಷ ಎದ್ದು ಕಾಣುತ್ತಿದೆ.

---------------------
ನನ್ನ ಆತ್ಮಹತ್ಯೆ ಯತ್ನ ನಾಟಕವಲ್ಲ - ಗೂಳಿಹಟ್ಟಿ ಶೇಖರ್, ಶಾಸಕ
ಮತ್ತೇಕೆ ಅದು ಯಶಸ್ವಿಯಾಗಲಿಲ್ಲ?
---------------------

ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರಕಾರ ನಡೆಸುವುದು ಅನಿವಾರ್ಯ - ದೇವೇಗೌಡ, ಮಾಜಿ ಪ್ರಧಾನಿ
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಬೇಕಾದರೆ ಅನಿವಾರ್ಯ.

---------------------

ರಫೇಲ್ ಒಪ್ಪಂದದ ತನಿಖೆಯಿಂದ ಮೋದಿಯನ್ನು ಬಚಾವ್‌ಮಾಡಲು ಯಾರಿಂದಲೂ ಸಾಧ್ಯವಿಲ್ಲ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಮೋದಿಯಿಂದ ದೇಶವನ್ನು ಬಚಾವ್ ಮಾಡುವವರು ಸದ್ಯಕ್ಕೆ ಬೇಕಾಗಿದೆ.

---------------------
ಹಗ್ಗದ ಮೇಲಿನ ನಡಿಗೆಯಂತೆ ನಾನು ಸರಕಾರ ನಡೆಸುತ್ತಿದ್ದೇನೆ - ಕುಮಾರಸ್ವಾಮಿ, ಮುಖ್ಯಮಂತ್ರಿ
ದೊಂಬರಾಟ ಎಂದ ಮೇಲೆ ಹಗ್ಗದ ಮೇಲಿನ ನಡಿಗೆ ಕಡ್ಡಾಯ.

---------------------
 ಮೈತ್ರಿ ಎಂದರೆ ಕೊಟ್ಟು ತೆಗೆದುಕೊಳ್ಳುವುದು - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಏನು ಕೊಟ್ಟರೆ ಎಷ್ಟು ಕೊಡುತ್ತೀರಿ? ಎಂದು ಕೇಳಿದರಂತೆ ಕುಮಾರಸ್ವಾಮಿ.

---------------------
ಸಾಹಿತಿ ಯಾರ ಹಂಗಿಗೂ ಒಳಗಾಗಬಾರದು- ಎಸ್.ಎಲ್.ಭೆೈರಪ್ಪ, ಸಾಹಿತಿ
ಹಂಗಿನಲ್ಲಿದ್ದು ಆಡಿದ ಮಾತು.

---------------------

ತಾಜ್‌ಮಹಲ್ ಭೇಟಿ ನಂತರವಾದರೂ ಪ್ರಧಾನಿ ಮೋದಿ ಪ್ರೀತಿ, ಪ್ರೇಮ, ವಾತ್ಸಲ್ಯಗಳ ಪಾಠ ಕಲಿಯಲಿ -ಅಖಿಲೇಶ್ ಯಾದವ್, ಎಸ್ಪಿ ನಾಯಕ

ಅವರು ಭೇಟಿ ಮಾಡಿದ್ದು ಯಾವ ಭಾಗದಿಂದ ಒಡೆದರೆ ಚೆನ್ನಾಗಿರುತ್ತದೆ ಎನ್ನುವುದನ್ನು ಪರಿಶೀಲಿಸಲು.

---------------------
ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕಿದರೆ ರಾಜಕಾರಣಿಗಳು ಒಳ್ಳೆಯ ನಿದ್ದೆ ಮಾಡಬಹುದು - ನೀಲೇಶ್ ಕಬ್ರಲ್, ಗೋವಾ ಸಚಿವ

ರಾಜಕಾರಣಿಗಳು ನಿದ್ದೆ ಮಾಡಬಾರದು ಎಂದೇ ಅದಕ್ಕೆ ಕಡಿವಾಣ ಹಾಕಿಲ್ಲ.

---------------------
ನನ್ನನ್ನು ಕಂಡರೆ ಭಯಪಡುವ ಅಗತ್ಯವಿಲ್ಲ - ಯೋಗಿಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಉತ್ತರಪ್ರದೇಶದಲ್ಲಿ ನಡೆಯುತ್ತಿರುವುದು ನೋಡಿದರೆ ಭಯಪಡದೆ ಗತ್ಯಂತರವಿಲ್ಲ.
 

share
ಪಿ.ಎ.ರೈ
ಪಿ.ಎ.ರೈ
Next Story
X