ಬಿಜೆಪಿಯವರು ನಮ್ಮವರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ನಿಜ: ಸಚಿವ ಝಮೀರ್ ಅಹ್ಮದ್

ಬೆಂಗಳೂರು, ಜ.14: ಹೊರಗಡೆ ಹೋಗಿರುವ ಕಾಂಗ್ರೆಸ್ ಶಾಸಕರು ಪುನಃ ವಾಪಸ್ಸಾಗಲಿದ್ದಾರೆ. ಎರಡು ದಿನ ಕಾದು ನೋಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಮುಂಬೈಗೆ ತೆರಳಿರುವುದು ಖಾಸಗಿ ಕಾರ್ಯಕ್ರಮಗಳಿಗಾಗಿ. ಯಾರೂ ಬಿಜೆಪಿಗೆ ಹೋಗುವುದಿಲ್ಲ. ಬೇರೆ ಬೇರೆ ಕಾರಣಕ್ಕಾಗಿ ಮುಂಬೈನಲ್ಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯವರು ನಮ್ಮವರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ನಿಜ. ಆದರೆ, ಇದು ಯಶಸ್ವಿಯಾಗುವುದಿಲ್ಲ. ಎರಡು ಮೂರು ದಿನ ತಾಳ್ಮೆಯಿಂದಿರಿ. ಎಲ್ಲ ಶಾಸಕರು ಬೆಂಗಳೂರಿಗೆ ವಾಪಸ್ಸು ಬರುತ್ತಾರೆ ಎಂದ ಅವರು, ಸರಕಾರ ಸುಭದ್ರವಾಗಿದೆ. ಯಾವುದೇ ಅಪಾಯವೂ ಇಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ ಎಂದು ನುಡಿದರು.
Next Story





