ಬಜರಂಗದಳ ಪೋಸ್ಟರ್‌ನಲ್ಲಿ ಕಾಣಿಸಿಕೊಂಡ ಬುಲಂದ್‌ಶಹರ್ ಹಿಂಸಾಚಾರದ ಪ್ರಮುಖ ಆರೋಪಿ

ಲಕ್ನೊ, ಜ.14: ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ಗುಂಪು ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಯೋಗೇಶ್ ರಾಜ್ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ನ ಪೋಸ್ಟರ್‌ನಲ್ಲಿ ಕಾಣಿಸಿಕೊಂಡು ಜನತೆಗೆ ಮಕರಸಂಕ್ರಾಂತಿ ಹಾಗೂ ಗಣರಾಜ್ಯೋತ್ಸವದ ಶುಭಾಶಯ ಸಲ್ಲಿಸಿದ್ದಾನೆ!.
ಬುಲಂದ್‌ಶಹರ್ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಯೋಗೇಶ್ ರಾಜ್ ತಲೆಮರೆಸಿಕೊಂಡಿದ್ದ. ಜನವರಿ 3ರಂದು ಈತನನ್ನು ಬಂಧಿಸಲಾಗಿದೆ. ಸೆರೆಯಲ್ಲಿರುವಂತೆಯೇ ಈತ ಜನತೆಗೆ ಮಕರಸಂಕ್ರಾಂತಿಯ ಶುಭಾಶಯ ಸಲ್ಲಿಸಿದ ಪೋಸ್ಟರ್‌ಗಳು ನಗರದ ಹಲವೆಡೆ ಕಂಡು ಬಂದಿದೆ. ಯೋಗೇಶ್ ರಾಜ್ ಅಮಾಯಕನಾಗಿದ್ದು ಶೀಘ್ರವೇ ಆರೋಪ ಮುಕ್ತನಾಗುತ್ತಾನೆ ಎಂದು ಬಜರಂಗದಳ ತಿಳಿಸಿದೆ.
ಬುಲಂದ್‌ಶಹರ್‌ನಲ್ಲಿ ಗೋಹತ್ಯೆ ಮಾಡಲಾಗಿದೆ ಎಂಬ ಗಾಳಿ ಸುದ್ದಿಯ ಹಿನ್ನೆಲೆಯಲ್ಲಿ ಸುಮಾರು 500ರಷ್ಟು ಮಂದಿಯಿದ್ದ ಗುಂಪು ದಾಂಧಲೆ ನಡೆಸುತ್ತಿತ್ತು. ಗುಂಪನ್ನು ಚದುರಿಸಲು ಮುಂದಾದ ಪೊಲೀಸ್ ಇನ್‌ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹಾಗೂ ಯೋಗೇಶ್ ರಾಜ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ತನ್ನನ್ನು ಸುತ್ತುವರಿದಿದ್ದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಿಂಗ್‌ರನ್ನು ಬೆನ್ನತ್ತಿದ ತಂಡವು ಅವರಿಗೆ ಹೊಲದಲ್ಲಿ ದಿಗ್ಬಂಧನ ವಿಧಿಸಿ, ತೀವ್ರವಾಗಿ ಹಲ್ಲೆ ನಡೆಸಿ ಬಳಿಕ ಗುಂಡಿಕ್ಕಿತ್ತು. ಸಿಂಗ್ ಮೃತಪಟ್ಟಿದ್ದು ಈ ಪ್ರಕರಣದಲ್ಲಿ ಯೋಗೇಶ್ ರಾಜ್ ಪ್ರಮುಖ ಆರೋಪಿಯಾಗಿದ್ದಾನೆ.







