ನಾಡೋಜ ನಾರಾಯಣರೆಡ್ಡಿ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ

ಬೆಂಗಳೂರು, ಜ. 14: ಸಾವಯವ ಕೃಷಿಕ, ನಾಡೋಜ ಎಲ್.ನಾರಾಯಣರೆಡ್ಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾರಾಯಣರೆಡ್ಡಿ ಅವರು ಫುಕುವೋಕಾ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡ ಸಾಧಕ. ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ, ನೀರಿನ ಸದ್ಬಳಕೆ ಮೊದಲಾದ ವಿಚಾರಗಳಲ್ಲಿ ಅವರು ನಮ್ಮ ರೈತ ಬಾಂಧವರಿಗೆ ಮಾದರಿ ಎಂದು ಕುಮಾರಸ್ವಾಮಿ ಸ್ಮರಿಸಿದ್ದಾರೆ.
ನಾರಾಯಣರೆಡ್ಡಿ ಅವರ ನಿಧನದಿಂದ ರಾಜ್ಯವು ಕೃಷಿ ವಲಯದಲ್ಲಿ ಒಬ್ಬ ಅತ್ಯುತ್ತಮ ಮಾರ್ಗದರ್ಶಕ, ಮಾದರಿ ರೈತನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಬಂಧುಮಿತ್ರರಿಗೆ ನೀಡಲಿ ಎಂದು ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ
Next Story





