ಸಾಗರದ ವ್ಯಕ್ತಿ ಕೆಎಂಸಿಯಲ್ಲಿ ಸಾವು
ಉಡುಪಿ, ಜ.14: ಶಂಕಿತ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯಲು ಮಣಿ ಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಸಾಗರದ ರೋಗಿಯೊಬ್ಬರು ಇಂದು ಮೃತಪಟ್ಟ ಬಗ್ಗೆ ವರದಿಯಾಗಿದೆ.
‘ಆದರೆ ಮೃತ ರೋಗಿಗೆ ಮಂಗನ ಕಾಯಿಲೆ ಇರಲಿಲ್ಲ. ಅವರ ಸಾವಿಗೂ, ಮಂಗನ ಕಾಯಿಲೆಗೂ ಯಾವುದೇ ಸಂಬಂಧ ಇಲ್ಲ. ಕೆಎಂಸಿ ಮಣಿಪಾಲದಲ್ಲಿ ಈವರೆಗೆ ಮಂಗನ ಕಾಯಿಲೆಯಿಂದ ಯಾರೂ ಮೃತಪಟ್ಟಿಲ್ಲ’ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
Next Story





