ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದಿಂದ ಹೆಲ್ತ್‌ಕೇರ್ ಮ್ಯಾನೆಜ್ಮೆಂಟ್ ಆ್ಯಂಡ್ ಇಕನಾಮಿಕ್ಸ್ ಕಾಲೇಜು ಸ್ಥಾಪನೆ

ದುಬೈ, ಜ.14: ವೈದ್ಯಕೀಯ ಶಿಕ್ಷಣದಲ್ಲಿ ಹೊಸಹೊಸ ಮೈಲಿಗಲ್ಲುಗಳ್ಳನ್ನು ಕ್ರಮಿಸುತ್ತಿರುವ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ ಇದೀಗ ಹೆಲ್ತ್‌ಕೇರ್ ಮ್ಯಾನೆಜ್ಮೆಂಟ್ ಆ್ಯಂಡ್ ಇಕನಾಮಿಕ್ಸ್ ಕಾಲೇಜನ್ನು ಸ್ಥಾಪಿಸಿದ್ದು 2019ರ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಆರಂಭಿಸಲಿದೆ.
ಮಧ್ಯಪ್ರಾಚ್ಯದಲ್ಲಿ ಈ ಮಾದರಿಯ ಮೊದಲ ಸಂಪೂರ್ಣ ಅವಧಿಯ ಕಾಲೇಜು ಇದಾಗಿದ್ದು ನಿರಂತರವಾಗಿ ಬೆಳೆಯುತ್ತಿರುವ ಆರೋಗ್ಯ ಕ್ಷೇತ್ರಕ್ಕೆ ಸ್ಪಂದಿಸುವಂತೆ ವಿನ್ಯಾಸಗೊಳಿಸಲಾಗಿರುವ ಪದವಿ ಮತ್ತು ಸ್ನಾತಕೋತರ ಪದವಿ ಶಿಕ್ಷಣವನ್ನು ಒದಗಿಸುತ್ತದೆ. ಹೊಸದಾಗಿ ಆರಂಭವಾಗಿರುವ ಹೆಲ್ತ್‌ಕೇರ್ ಮ್ಯಾನೆಜ್ಮೆಂಟ್ ಆ್ಯಂಡ್ ಇಕನಾಮಿಕ್ಸ್ ಕಾಲೇಜಿನಲ್ಲಿ ಎರಡು ವಿಷಯಗಳಲ್ಲಿ ಶಿಕ್ಷಣ ಒದಗಿಸಲಿದೆ.
ಹೆಲ್ತ್‌ಕೇರ್ ಮ್ಯಾನೆಜ್ಮೆಂಟ್ ಆ್ಯಂಡ್ ಇಕನಾಮಿಕ್ಸ್‌ನಲ್ಲಿ ವಿಜ್ಞಾನ ಪದವಿ (ಬಿಎಸ್ಸಿ.ಎಚ್‌ಎಂಇ) ನಾಲ್ಕು ವರ್ಷಗಳ ಕಾರ್ಯಕ್ರಮವಾಗಿದ್ದು ಆರೋಗ್ಯಕ್ಷೇತ್ರದ ಆಳವಾದ ಅರಿವು, ಅದರ ಭಾಷೆ ಮತ್ತು ವಿಶಿಷ್ಟ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಹೆಲ್ತ್‌ಕೇರ್ ಮ್ಯಾನೆಜ್ಮೆಂಟ್ ಆ್ಯಂಡ್ ಇಕನಾಮಿಕ್ಸ್‌ನಲ್ಲಿ ಕಾರ್ಯನಿರ್ವಾಹಕ ಸ್ನಾತಕೋತರ ಪದವಿ (ಇಎಂಎಚ್‌ಎಂಇ) ಹನ್ನೆರಡು ತಿಂಗಳ ಕಾರ್ಯಕ್ರಮ ಆಗಿದೆ. ಇದರಲ್ಲಿ ಆರೋಗ್ಯಕ್ಷೇತ್ರದ ಮಧ್ಯಮದಿಂದ ಉನ್ನತ ಮಟ್ಟದ ವೃತ್ತಿಪರರು ಲಾಭವನ್ನು ಪಡೆಯಲಿದ್ದಾರೆ.
ಈ ಕಾರ್ಯಕ್ರಮವು ಸಕ್ರಿಯ ವೃತ್ತಿಪರರು ತಮ್ಮ ವೃತ್ತಿಜೀವನದ ಸಂಭಾವ್ಯಗಳನ್ನು ಹೆಚ್ಚುಗೊಳಿಸುವ ಮತ್ತು ತಮ್ಮ ವೃತ್ತಿಯ ಜಾಲವನ್ನು ವಿಸ್ತಾರ ಗೊಳಿಸುವ ಅವಕಾಶ ನೀಡುತ್ತದೆ. ಜಿಎಂಯು ಔಷಧಿ, ದಂತಚಿಕಿತ್ಸೆ, ಫಾರ್ಮಸಿ ಸೇರಿದಂತೆ ಆರೋಗ್ಯ ವೃತ್ತಿ ಶಿಕ್ಷಣವನ್ನು ಒದಗಿಸುವಲ್ಲಿ ಪರಿಣತಿಯನ್ನು ಹೊಂದಿರುವ ವಿಶ್ವವಿದ್ಯಾನಿಲಯವಾಗಿದೆ. ಕಾಲೇಜು ಮತ್ತು ಅದರ ಕಾರ್ಯಕ್ರಮಗಳು ಯುಎಇಯ ಶಿಕ್ಷಣ ಸಚಿವಾಲಯದ ದೃಢೀಕರಣ ಪಡೆದಿದೆ.
ಹೆಲ್ತ್‌ಕೇರ್ ಮ್ಯಾನೆಜ್ಮೆಂಟ್ ಆ್ಯಂಡ್ ಇಕನಾಮಿಕ್ಸ್ ಕಾಲೇಜು ಯುಎಇ ಮತ್ತು ಜಿಸಿಸಿ ಹಾಗೂ ಭಾರತ, ಅಮೆರಿಕ ಮತ್ತು ಆಫ್ರಿಕಾದಲ್ಲೂ ಆರೋಗ್ಯಕ್ಷೇತ್ರದ ಜೊತೆಗಾರರೊಂದಿಗೆ ಸುದೃಡ ಸಂಬಂಧವನ್ನು ಹೊಂದಿದೆ.







