ಖೇಲೋ ಭಾರತ್ ರಾಷ್ಟ್ರಮಟ್ಟದ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್ : ಆಳ್ವಾಸ್‍ನ ಲಾವಣ್ಯ ರೈಗೆ ಬೆಳ್ಳಿ

ಮೂಡುಬಿದಿರೆ, ಜ. 14: ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಭಾರತ್ ರಾಷ್ಟ್ರಮಟ್ಟದ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ರೈ 71 ಕೆ.ಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಅವರು ನಾಗ್ಪುರದಲ್ಲಿ ನಡೆದ ಜ್ಯೂನಿಯರ್ ನ್ಯಾಶನಲ್ ಚಾಂಪಿಯನ್‍ಶಿಪ್‍ನಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದರು.
Next Story





