'ಕನ್ನಡ ಮಾಧ್ಯಮ ಉಳಿಸಿ ಬೆಳೆಸಲು, ಶಾಲೆ ಉಳಿಸಲು ಹಳೆವಿದ್ಯಾರ್ಥಿಗಳು ಮುಂದಾಗಬೇಕು'
ಮೂಡುಬಿದಿರೆ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲಾ ಸುವರ್ಣ ಮಹೋತ್ಸವ
ಮೂಡುಬಿದಿರೆ, ಜ. 14: ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯ ನಡುವೆ ಬಾಬು ರಾಜೇಂದ್ರ ಪ್ರಸಾದ್ ಕನ್ನಡ ಮಾಧ್ಯಮಪ್ರೌಢ ಶಾಲೆ ಉಳಿದು ಬೆಳೆಯಲು ಶಾಲೆಯ ಹಳೆ ವಿದ್ಯಾರ್ಥಿಗಳೇ ಕಾರಣ. ಶಾಲೆಯ ಉಸಿರಾಗಿರುವ ಹಳೆ ವಿದ್ಯಾರ್ಥಿಗಳು ಶಾಲೆಯನ್ನು ಆದರ್ಶ ವಿದ್ಯಾಸಂಸ್ಥೆಯಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಮಾದರಿಯಾಗಿದೆ ಎಂದು ಎಂದು ಶಾಲಾಡಳಿತ ಮಂಡಳಿ ಗೌರವಾಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು.
ಅವರು ಸೋಮವಾರ ಅಪರಾಹ್ನ ಮಹಾವೀರ ವಿದ್ಯಾವರ್ಧಕ ಸಂಘ ಪ್ರವರ್ತಿತ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಎಂಸಿಎಸ್ ಬ್ಯಾಂಕ್ ಪ್ರಾಯೋಜಿಸಿದ ಶಾಲಾ ವಿದ್ಯುದೀಕರಣವನ್ನು ಉದ್ಘಾಟಿಸಿದ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ, `ಹಳೆ ವಿದ್ಯಾರ್ಥಿಗಳು ಸಕ್ರಿಯರಾಗಿರುವ ಶಾಲೆಗಳು ಅಭಿವೃದ್ದಿ ಹೊಂದುತ್ತವೆ ಎಂಬುದಕ್ಕೆ ಈ ಪ್ರೌಢಶಾಲೆಯೇ ಸಾಕ್ಷಿ; ಭಾರತದ ಪ್ರಥಮ ರಾಷ್ಟ್ರಪತಿಯವರ ಹೆಸರು ಹೊತ್ತ ಈ ಶಾಲೆಯ ವಿದ್ಯಾರ್ಥಿಗಳು ಅವರ ಗುಣಗಳನ್ನು ಮೈಗೂಡಿಸಿಕೊಳ್ಳುವಂತಾಗಲಿ' ಎಂದು ಹಾರೈಸಿದರು.
ಶಾಲಾ ಸಂಚಾಲಕ ಕೆ. ವಿಶ್ವನಾಥ ಪ್ರಭು ವಿದ್ಯಾಭಿಮಾನಿಗಳ ಸಹಕಾರ ಯಾಚಿಸಿದರು. ಶಾಲಾ ಹಳೆ ವಿದ್ಯಾರ್ಥಿ, ಉದ್ಯಮಿ ಜಿ.ಉಮೇಶ ಪೈ, ಆರ್. ರವೀಂದ್ರ ಪೈ, ಪ್ರಭಾರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಬಿ. ಮತ್ತಿತರರು ಶುಭಾಶಂಸನೆಗೈದರು.
ಇನ್ನರ್‍ವೀಲ್ ಅಧ್ಯಕ್ಷೆ ಚಂದ್ರಿಕಾ ದಯಾನಂದ ಮಲ್ಯ, ತಿಮ್ಮಯ ಶೆಟ್ಟಿ, ರಾಜಶ್ರೀ ವಿ.ಪ್ರಭು, ಡಾ. ವಿನಯಕುಮಾರ ಹೆಗ್ಡೆ, ಶಾಲಾ ಉಪಾಧ್ಯಕ್ಷ ಸಂಪತ್ ಡಿ.ಸಾಮ್ರಾಜ್ಯ, ಪುರಸಭಾ ಸದಸ್ಯರಾದ ಎಂ. ಬಾಹುಬಲಿ ಪ್ರಸಾದ್, ಸುರೇಶ್ ಕೋಟ್ಯಾನ್, ಉದ್ಯಮಿ ಸುರೇಶ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ. ರಘುವೀರ ಶೆಣೈ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಬಾಹುಬಲಿ, ನಾರಾಯಣ ಪಿ, ನಿವೃತ್ತ ಶಿಕ್ಷಕರಾದ ಗೀತಾ ವಿ. ಶರ್ಮ, ಕೆ. ವಿ. ಶರ್ಮ, ಎಂಸಿಎಸ್ ಬ್ಯಾಂಕ್ ಸಿಇಓ ಚಂದ್ರಶೇಖರ ಎಂ., ರಾಜೇಶ್ ಬಂಗೇರ, ಅಜಿತ್ ಕುಮಾರ್, ವಕೀಲ ಮನೋಜ್ ಶೆಣೈ, , ಪುಷ್ಪರಾಜ ಜೈನ್, ಅಬುಲಾಲ ಪುತ್ತಿಗೆ , ಜ್ಞಾನೇಶ್ವರ ಪೈ, ವಿಶ್ವನಾಥ ಭಟ್, ಸಿ.ಎಚ್. ಅಬ್ದುಲ್ ಗಪೂರ್, ಸಂಜಯ್ ಭಟ್, ಮೋಹನದಾಸ ಭಂಡಾರ್ಕರ್ , ಬೋಳ ವಿಶ್ವನಾಥ ಕಾಮತ್, ಸುಬ್ರಹ್ಮಣ್ಯ ಪಾಂಗಣ್ಣಾಯ, ಮೊದಲಾದವರು ಅತಿಥಿಗಳಾಗಿದ್ದರು.
ಸ್ಥಾಪಕರಿಗೆ ನಮನ:
ಪ್ರಾರಂಭದಲ್ಲಿ ಅತಿಥಿಗಳು, ಗಣ್ಯರು ಶಾಲಾ ಸಂಸ್ಥಾಪಕ ಪ್ರಮುಖರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು. ದಾನಿಗಳು, ನಿವೃತ್ತ ಹಾಗೂ ಪ್ರವೃತ್ತ ಶಿಕ್ಷಕ,ಶಿಕ್ಷಕೇತರರು, ಹಳೆ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಜಾ ಅವರು ಶಾಲಾ ವರದಿ ವಾಚಿಸಿದರು.
ಶಾಲಾಡಳಿತ ಮಂಡಳಿ ಅಧ್ಯಕ್ಷ ಪಿ. ರಾಮನಾಥ ಭಟ್ ಸ್ವಾಗತಿಸಿದರು. ಎಂ. ಗಣೇಶ ಕಾಮತ್ ಪ್ರಸ್ತಾವನೆಗೈದರು. ಶಿಕ್ಷಕರಾದ ಜನಾರ್ದನ ನಾಯ್ಕ್ ವಂದಿಸಿ, ವೆಂಕಟರಮಣ ಕೆರೆಗದ್ದೆ ನಿರೂಪಿಸಿದರು. ಮುಂಜಾನೆ ವಕೀಲ ಕೆ. ಆರ್. ಪಂಡಿತ್ ಅಧ್ಯಕ್ಷತೆಯಲ್ಲಿ ಕೆ. ವೆಂಕಟೇಶ ಕಾಮತ್ ಧ್ವಜಾರೋಹಣ ಗೈದರು, ಶ್ರೀನಿವಾಸ ಕಿಣಿ ಬಹುಮಾನ ವಿತರಿಸಿದರು.







