ಕಾಬೂಲ್: ಕಾರ್ ಬಾಂಬ್ ಸ್ಫೋಟದಲ್ಲಿ ಭಾರತೀಯ ಸಾವು
ಕಾಬೂಲ್, ಜ. 15: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಸೋಮವಾರ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದು, ಈ ಪೈಕಿ ಓರ್ವ ಭಾರತೀಯನಾಗಿದ್ದಾರೆ.
ಕಾಬೂಲ್ನಲ್ಲಿರುವ ಭಾರೀ ಭದ್ರತೆಯ ವಿದೇಶ ಸಂಕೀರ್ಣದ ಸಮೀಪ ನಡೆದ ಸ್ಫೋಟದಲ್ಲಿ 110ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಭಾರತೀಯನ ಸಾವನ್ನು ಭಾರತದ ವಿದೇಶ ಸಚಿವಾಲಯ ಮಂಗಳವಾರ ಪ್ರಕಟಿಸಿದೆ. ಆದರೆ, ಮೃತ ಭಾರತೀಯನ ಗುರುತನ್ನು ಅದು ಬಹಿರಂಗಪಡಿಸಿಲ್ಲ.
Next Story