ಹಲವು ಬಾರಿ ಸೋನು ನಿಗಮ್ ರನ್ನು ಕೊಲ್ಲಲು ಯತ್ನಿಸಿದ್ದ ಬಾಳಾ ಠಾಕ್ರೆ
ನಾರಾಯಣ್ ರಾಣೆ ಪುತ್ರ ನಿಲೇಶ್ ಗಂಭೀರ ಆರೋಪ
#"ಠಾಕ್ರೆಯ ಕರ್ಜತ್ ಫಾರ್ಮ್ ಹೌಸ್ ನಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ"
ಹೊಸದಿಲ್ಲಿ, ಜ.15: ಶಿವಸೇನೆಯ ನಾಯಕ ಬಾಳಾ ಠಾಕ್ರೆ ಪ್ರಸಿದ್ಧ ಗಾಯಕ ಸೋನು ನಿಗಮ್ ರನ್ನು ಕೊಲ್ಲಲು ಬಯಸಿದ್ದರು ಎಂದು ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ್ ರಾಣೆಯವರ ಪುತ್ರ ನಿಲೇಶ್ ರಾಣೆ ಗಂಭೀರ ಆರೋಪ ಮಾಡಿದ್ದಾರೆ.
ಶಿವಸೇನೆಯ ನಾಯಕ ಆನಂದ್ ಡಿಘೆಯ ಸಾವಿಗೆ ಭಾಳಾ ಠಾಕ್ರೆ ಜವಾಬ್ದಾರರು, ಹಲವು ಬಾರಿ ಸೋನು ನಿಗಮ್ ರನ್ನು ಕೊಲ್ಲಲು ಬಾಳಾ ಠಾಕ್ರೆ ಯತ್ನಿಸಿದ್ದರು ಎಂದೂ ಅವರು ಆರೋಪಿಸಿದ್ದಾರೆ.
“ಸೋನು ನಿಗಮ್ ರಿಗೆ ಇದು ತಿಳಿದಿತ್ತು. ಸೋನು ನಿಗಮ್ ಮತ್ತು ಬಾಳಾ ಠಾಕ್ರೆ ಕುಟುಂಬಗಳ ನಡುವಿನ ಸಂಬಂಧವೇನು?, ಬಾಳಾ ಠಾಕ್ರೆಯ ಕರ್ಜತ್ ಫಾರ್ಮ್ ಹೌಸ್ ನಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ. ನಾವು ಬಾಯಿ ತೆರೆಯಲು ಒತ್ತಾಯಿಸಬೇಡಿ” ಎಂದವರು ಹೇಳಿದರು.
"ಆನಂದ್ ದಿಘೆಯವರನ್ನು ಕೊಲ್ಲಲಾಗಿತ್ತು. ಈ ಕೊಲೆಯ ಬಗ್ಗೆ ತಿಳಿದು ಕೋಪಗೊಂಡ ಇಬ್ಬರು ಶಿವಸೇನೆ ಕಾರ್ಯಕರ್ತರನ್ನೂ ಕೊಲ್ಲಲಾಯಿತು” ಎಂದವರು ಆರೋಪಿಸಿದರು.
Next Story