ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನ ಸೈಯದ್ ಮುಹಮ್ಮದ್ ವಾಝೆ ರಶೀದ್ ಹಸನಿ ನದ್ವಿ ನಿಧನ
ಲಕ್ನೋ, ಜ.16: ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಹೆಸರಾಂತ ಬರಹಗಾರ ಹಾಗೂ ವಿಶ್ವವಿಖ್ಯಾತ ಲಕ್ನೋದ ದಾರುಲ್ ಉಲೂಂ ನದ್ವತುಲ್ ಉಲಮಾ ಇದರ ಕಾರ್ಯನಿವಾರ್ಹಕ ಮಂಡಳಿ ಸದಸ್ಯ ಮತ್ತು ಅಲ್ಲಿನ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಮೌಲಾನ ಸೈಯದ್ ಮುಹಮ್ಮದ್ ವಾಝೆ ರಶೀದ್ ಹಸನಿ ನದ್ವಿ ಬುಧವಾರ ಬೆಳಗ್ಗೆ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಇವರು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಅಧ್ಯಕ್ಷ ಮೌಲಾನಾ ರಾಬೆ ಹಾಸನಿ ನದ್ವಿ ಅವರ ಸೋದರ ಹಾಗೂ ದಿವಂಗತ ಮೌಲಾನಾ ಸಯ್ಯದ್ ಅಬುಲ್ ಹಸನ್ ಅಲಿ ನದ್ವಿ ಅವರ ಸೋದರಳಿಯ.
ವಿಶ್ವದ ಪ್ರಮುಖ ಮುಸ್ಲಿಂ ಧಾರ್ಮಿಕ ವಿದ್ವಾಂಸರ ಸಮಿತಿ ರಾಬಿತ ಆಲಮಿ ಇಸ್ಲಾಮಿ ಇದರ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಮೌಲಾನ ಸೈಯದ್ ಮುಹಮ್ಮದ್ ವಾಝೆ ರಶೀದ್ ಹಸನಿ ನದ್ವಿ ಅವರು ಹಲವು ಪ್ರಮುಖ ಅರಬಿಕ್ ಹಾಗೂ ಉರ್ದು ಪುಸ್ತಕಗಳ ಲೇಖಕರೂ ಆಗಿದ್ದಾರೆ.
Next Story