ಅರುಣಾಚಲ ಪ್ರದೇಶದ ಮಾಜಿ ಸಿಎಂ ಅಪಾಂಗ್ ಬಿಜೆಪಿಗೆ ರಾಜೀನಾಮೆ
“ಪಕ್ಷವು ವಾಜಪೇಯಿ ಸಿದ್ಧಾಂತಗಳನ್ನು ಪಾಲಿಸುತ್ತಿಲ್ಲ”
ಗುವಾಹತಿ, ಜ. 15: ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಗೆಗಾಂಗ್ ಅಪಾಂಗ್ ಬುಧವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ತತ್ವಗಳನ್ನು ಬಿಜೆಪಿ ಅನುಸರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ದಿವಂಗತ ವಾಜಪೇಯಿ ಅವರ ಸಿದ್ಧಾಂತಗಳನ್ನು ಪ್ರಸ್ತುತ ದಿನಗಳಲ್ಲಿ ಬಿಜೆಪಿ ಅನುಸರಿಸದೇ ಇರುವುದು ನನ್ನನ್ನು ಹತಾಶನನ್ನಾಗಿ ಮಾಡಿದೆ ಎಂದು ಹೇಳಿರುವ ಅಪಾಂಗ್ ರಾಜೀನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ರವಾನಿಸಿದ್ದಾರೆ. ‘‘ಪಕ್ಷ ಈಗ ಅಧಿಕಾರ ಪಡೆಯುವ ವೇದಿಕೆ ಆಗಿದೆ. ವಿಕೇಂದ್ರೀಕರಣ ಅಥವಾ ಪ್ರಜಾಪ್ರಭುತ್ವೀಯ ನಿರ್ಧಾರವನ್ನು ದ್ವೇಷಿಸುವ ನಾಯಕತ್ವವನ್ನು ಪಕ್ಷ ಹೊಂದಿದೆ. ಪಕ್ಷ ಸ್ಥಾಪನೆಯ ಸಂದರ್ಭ ಇದ್ದ ಮೌಲ್ಯಗಳಲ್ಲಿ ಈಗ ನಂಬಿಕೆ ಇಲ್ಲ’’ ಎಂದು ಅವರು ಹೇಳಿದ್ದಾರೆ.
Next Story