ಯು. ರಾಮದಾಸ ಸಾಮಗ ನಿಧನ

ಉಡುಪಿ, ಜ.16: ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಪಡುಸಗ್ರಿ ನಿವಾಸಿ ಯು.ರಾಮದಾಸ ಸಾಮಗರು (79) ಅಲ್ಪಕಾಲದ ಅಸ್ವಾಸ್ಥದಿಂದ ಮಂಗಳವಾರ ನಿಧನ ಹೊಂದಿದರು.
ಇವರು 30 ವರ್ಷ ಶ್ರೀ ಕೃಷ್ಣಮಠದ ಭೋಜನಶಾಲೆಯಲ್ಲಿ ಪಾಕತಜ್ಞರಾಗಿ ಹಾಗೂ 20 ವರ್ಷ ಪ್ರವಾಸಿ ಮಾಹಿತಿದಾರ (ಗೈಡ್) ಆಗಿ ಕಾರ್ಯ ನಿರ್ವಹಿಸಿದ್ದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story





