ತಲಪಾಡಿ: ಫಲಾಹ್ ಶಾಲೆಗೆ ರಾಜ್ಯ ಮಟ್ಟದ ಕರಾಟೆ ಪ್ರಶಸ್ತಿ

ಅಬ್ದುಲ್ ಸಯೀಮ್, ಇಸ್ಮಾಯೀಲ್, ಫಾತಿಮಾ, ಫೌಝಾನ್
ಮಂಗಳೂರು, ಜ.16: ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಂತರಶಾಲಾ/ ಕಾಲೇಜು ಕರಾಟೆ ಚಾಂಪಿಯನ್ಶಿಪ್ನಲ್ಲಿ ತಲಪಾಡಿ ಕೆ.ಸಿ.ರೋಡ್ನ ಫಲಾಹ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಶಾಲೆಯ ಏಳನೇಯ ತರಗತಿ ವಿದ್ಯಾರ್ಥಿ ಅಬ್ದುಲ್ ಸಯೀಮ್ (ಕಟಾ 1 ಬೆಳ್ಳಿ, ಕುಮಿಟೆ 1 ಚಿನ್ನ), ಮುಹಮ್ಮದ್ ಇಸ್ಮಾಯೀಲ್ ಫಝಲ್ (ಕಟಾ 1 ಕಂಚು), ಎರಡನೇ ತರಗತಿಯ ಫಾತಿಮಾ ತುಹ್ಫ (ಕುಮಿಟೆ 1 ಬೆಳ್ಳಿ, ಕಟಾ 1 ಕಂಚು) ಹಾಗೂ ನಾಲ್ಕನೇ ತರಗತಿಯ ಮುಹಮ್ಮದ್ ಫೌಝಾನ್ (ಕಟಾ 1 ಕಂಚು) ಪದಕಗಳನ್ನು ಗೆದ್ದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ತಿಳಿಸಿದ್ದಾರೆ.
Next Story





