ಹರ್ಯಾಣ: ರೆಸಾರ್ಟ್ ಎದುರುಗಡೆ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಹೊಸದಿಲ್ಲಿ/ಗುರ್ಗಾಂವ್, ಜ. 16: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಶಾಸಕರನ್ನು ಸೆಳೆಯದಂತೆ ಬಿಜೆಪಿ ತನ್ನ ಶಾಸಕರನ್ನು ಇರಿಸಿದ್ದ ಹರ್ಯಾಣದ ರಿಸೋರ್ಟ್‌ನ ಹೊರಭಾಗದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಬುಧವಾರ ಪ್ರತಿಭಟನೆ ನಡೆಸಿತು.
ಗುರ್ಗಾಂವ್‌ನ ಹೊರವಲಯದಲ್ಲಿ ಇರುವ ಪಂಚತಾರ ಐಟಿಸಿ ಗ್ರಾಂಡ್ ಭಾರತ್ ರಿಸೋರ್ಟ್‌ನ ಹೊರಗಡೆ ಹರ್ಯಾಣ ಪ್ರದೇಶ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ನೇತೃತ್ವದ ಯೂತ್ ಕಾಂಗ್ರೆಸ್‌ನ ಸುಮಾರು 20 ಮಂದಿ ಕಾರ್ಯಕರ್ತರು ಎನ್‌ಡಿಎ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಈ ದೇಶದ ಸಂವಿಧಾನಕ್ಕೆ ಅವಮಾನ ಮಾಡುತ್ತಿದೆ ಹಾಗೂ ಪ್ರಜಾಪ್ರಭುತ್ವವನ್ನು ಹತ್ಯೆಗೈಯುತ್ತಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
Next Story