ಅಮಿತ್ ಶಾಗೆ ಎಚ್1 ಎನ್1: ಏಮ್ಸ್ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ, ಜ.16: ಎಚ್1 ಎನ್1 ಸೋಂಕಿಗೆ ತುತ್ತಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
“ನಾನು ಎಚ್ 1 ಎನ್ 1 ಬಾಧಿತನಾಗಿದ್ದೇನೆ. ದೇವರ ದಯೆಯಿಂದ, ನಿಮ್ಮ ಪ್ರೀತಿ ಮತ್ತು ಹಾರೈಕೆಯಿಂದ ಶೀಘ್ರ ಗುಣಮುಖನಾಗಲಿದ್ದೇನೆ” ಎಂದು ಶಾ ಹೇಳಿದ್ದಾರೆ.
“ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಅವರು ಏಮ್ಸ್ ನಲ್ಲಿ ಸ್ವೈನ್ ಫ್ಲೂಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಅವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸುತ್ತೇನೆ” ಎಂದು ಗೃಹಸಚಿವ ರಾಜ್ ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
Next Story