ಕ್ರಿಕೆಟ್ ಪಂದ್ಯಾವಳಿ: ಹನೂರು ಹಂಟರ್ಸ್ ತಂಡ ಚಾಂಪಿಯನ್
ಹನೂರು,ಜ.16: ತಾಲೂಕಿನ ಪಳನೀಮೇಡು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹನೂರು ಹಂಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹನೂರು ತಾಲೂಕಿನ ಪಳನಿಮೇಡು ಗ್ರಾಮದ ಬ್ಲಾಸ್ಟರ್ಸ್ ತಂಡದ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ 15 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮಂಗಳವಾರ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಪಳನಿಮೇಡುವಿನ ಜೈಭೀಮ್ ಬ್ಲಾಸ್ಟರ್ಸ್ ತಂಡವನ್ನು ಸೋಲಿಸಿ ಹನೂರಿನ ಹಂಟರ್ಸ್ ತಂಡ ವಿಜಯಿಯಾಯಿತು.
ಹಂಟರ್ಸ್ ತಂಡಕ್ಕೆ ಪ್ರಥಮ ಬಹುಮಾನವಾಗಿ 7,500 ರೂ. ಹಾಗೂ ಟ್ರೋಫಿ ಪಳನಿಮೇಡುವಿನ ಜೈಭೀಮ್ ಬ್ಲಾಸ್ಟರ್ಸ್ ತಂಡಕ್ಕೆ 4 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಯಿತು. ಪಂದ್ಯ ಪುರುಷೋತ್ತಮನಾಗಿ ಹನೂರಿನ ಹಂಟರ್ಸ್ ತಂಡದ ರಿಜ್ವಾನ್ ಆಯ್ಕೆಯಾದರು.
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿದ ಎಲ್ಲಾ ಆಟಗಾರರನ್ನು ಹನೂರು ಹಂಟರ್ಸ್ ತಂಡದ ನಾಯಕ ಅಭಿ, ಹಿರಿಯ ಆಟಗಾರರಾದ ರಿಯಾಜ್, ಮನ್ಸೂರ್, ರುಹುಲ್ಲಾ, ರಮೇಶ್, ಚೇತನ್, ಆನಂದ್, ನಾಗರಾಜು, ಶಶಿ ಮುತ್ತು ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.