ನ್ಯೂಝಿಲೆಂಡ್ ತಂಡ ಪ್ರಕಟ: ಭಾರತ ವಿರುದ್ಧ ಏಕದಿನ ಸರಣಿ
ವೆಲ್ಲಿಂಗ್ಟನ್, ಜ.16: ಭಾರತ ವಿರುದ್ಧ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ ನ್ಯೂಝಿಲೆಂಡ್ ತಂಡ ಬುಧವಾರ 14 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ತಂಡದಲ್ಲಿ ಇತ್ತೀಚೆಗೆ ಶ್ರೀಲಂಕಾ ವಿರುದ್ದ ಆಡಿರುವ ಜಿಮ್ಮಿ ನೀಶಾಮ್ ಹಾಗೂ ಟಿಮ್ ಸೆಫರ್ಟ್ ಸ್ಥಾನ ಪಡೆದಿಲ್ಲ. ಇವರಿಬ್ಬರ ಜಾಗಕ್ಕೆ ಟಾಮ್ ಲಥಾಮ್ ಹಾಗೂ ಗ್ರಾಂಡ್‌ಹೋಮ್ ಆಯ್ಕೆಯಾಗಿದ್ದಾರೆ.
ಸರಣಿಯ ಮೊದಲ ಪಂದ್ಯ ಜ.23 ರಂದು ನಡೆಯಲಿದ್ದು, ಜ.26, 28ರಂದು 2 ಹಾಗೂ 3ನೇ ಪಂದ್ಯಗಳು ನಡೆಯುತ್ತವೆ. ಜ.31 ರಂದು 4ನೇ ಹಾಗೂ ಫೆ. 3ರಂದು ಕೊನೆಯ ಪಂದ್ಯ ನಡೆಯಲಿದೆ.
►ಕಿವೀಸ್ ಏಕದಿನ ತಂಡ: ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್, ಡಾಗ್ ಬ್ರಾಸ್‌ವೆಲ್, ಕಾಲಿನ್ ಗ್ರಾಂಡ್‌ಹೋಮ್, ಲಾಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಮ್, ಕಾಲಿನ್ ಮುನ್ರೊ, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.
Next Story





