ಮುಂಬೈನಲ್ಲಿ ಡ್ಯಾನ್ಸ್ ಬಾರ್ ಪುನರಾರಂಭಕ್ಕೆ ಸುಪ್ರೀಂ ಅನುಮತಿ

ಹೊಸದಿಲ್ಲಿ, ಜ.17: ಡ್ಯಾನ್ಸ್ ಬಾರ್ಗಳಿಗೆ ಪರವಾನಿಗೆ ನೀಡಲು ಮಹಾರಾಷ್ಟ್ರ ಸರಕಾರ ವಿಧಿಸಿದ್ದ ಷರತ್ತುಗಳನ್ನು ಸರಳಗೊಳಿಸಿರುವ ಸುಪ್ರೀಂಕೋರ್ಟ್ ಮುಂಬೈ ಹಾಗೂ ಇತರ ನಗರಗಳಲ್ಲಿ ಡ್ಯಾನ್ಸ್ ಬಾರ್ಗಳನ್ನು ತೆರೆಯಲು ದಾರಿ ಮಾಡಿಕೊಟ್ಟಿದೆ.
2005ರಿಂದ ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ಗಳಿಗೆ ಪರವಾನಿಗೆ ನೀಡುತ್ತಿಲ್ಲ. ಹೀಗಾಗಿ ಅಲ್ಲಿ ಡ್ಯಾನ್ಸ್ಬಾರ್ಗಳನ್ನು ಮುಚ್ಚಲಾಗಿತ್ತು.
ಡ್ಯಾನ್ಸ್ ಬಾರ್ಗಳಿಗೆ ಸಂಬಂಧಿಸಿ ರಾಜ್ಯ ಸರಕಾರ ಅವಿವೇಕದ ಷರತ್ತುಗಳನ್ನು ವಿಧಿಸಿದೆ ಎಂದ ಸುಪ್ರೀಂಕೋರ್ಟ್, ಡ್ಯಾನ್ಸ್ಬಾರ್ನೊಳಗೆ ಸಿಸಿಟಿವಿ ಅಳವಡಿಕೆ ಕಡ್ಡಾಯವೆಂಬ ಮಹಾರಾಷ್ಟ್ರ ಸರಕಾರದ ನಿಯಮವನ್ನು ತಳ್ಳಿಹಾಕಿದೆ. ಇದು ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಉತ್ತಮ ಗುಣನಡತೆಯ ವ್ಯಕ್ತಿಗೆ ಮಾತ್ರ ಡ್ಯಾನ್ಸ್ ಬಾರ್ ಲೈಸೆನ್ಸ್ ಪಡೆಯಬೇಕೆಂಬ ರಾಜ್ಯ ಸರಕಾರದ ನಿಯಮವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ಉತ್ತಮ ನಡತೆಯನ್ನು ವ್ಯಾಖ್ಯಾನಿಸುವುದು ತುಂಬಾ ಕಷ್ಟ ಎಂದಿದೆ.
ಬಾರ್ನೊಳಗೆ ಹಣ ಬಳಕೆಯಾಗುತ್ತಿರುವ ಬಗ್ಗೆ ತನ್ನ ನಿರ್ಧಾರ ತಿಳಿಸಿದ ಸುಪ್ರೀಂಕೋರ್ಟ್, ಕೆಲಸಗಾರರಿಗೆ ಟಿಪ್ಸ್ನ್ನು ನೀಡಬಹುದು. ಆದರೆ,ಬಾರ್ನೊಳಗೆ ಹಣ ಹಾಗೂ ನಾಣ್ಯಗಳ ಚೆಲ್ಲುವಂತಿಲ್ಲ್ಲ ಎಂದಿದೆ.