ತೊಕ್ಕೊಟ್ಟು: ಪಬ್ಲಿಸಿಟಿ ಕನ್ವೆನ್ಷನ್ ಕಾರ್ಯಕ್ರಮ

ಮಂಗಳೂರು, ಜ.17: ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಮತ್ತು ತೊಕ್ಕೊಟ್ಟು ಸೆಕ್ಟರ್‌ನ ಜಂಟಿ ಆಶ್ರಯದಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್‌ನ ಪಬ್ಲಿಸಿಟಿ ಕನ್ವೆನ್ಷನ್ ಕಾರ್ಯಕ್ರಮವು ತೊಕ್ಕೊಟ್ಟು ತಾಜುಲ್ ಉಲಮಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಮಾತನಾಡಿದ ದ.ಕ.ಜಿಲ್ಲಾ ಎಸೆಸ್ಸೆಫ್ ನಿಕಟಪೂರ್ವ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ ಮುಸ್ಲಿಂ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸುನ್ನತ್ ಜಮಾಅತ್‌ನ ಆದರ್ಶದಲ್ಲಿ ನಂಬಿಕೆ ಇರುವ ಎಲ್ಲಾ ಮುಸಲ್ಮಾನರನ್ನು ಸೇರಿಸಿ ರಾಜಕೀಯ ಪಕ್ಷಕ್ಕಿಂತ ಭಿನ್ನವಾಗಿ ಸಮಸ್ಯೆಗಳನ್ನು ಎದುರಿಸಲು ಮತ್ತು ಮುಸ್ಲಿಂ ಸಮುದಾಯದವರಿಗೆ ವಿವಿಧ ಸವಲತ್ತುಗಳನ್ನು ಪಡೆಯಲು ಕರ್ನಾಟಕ ಮುಸ್ಲಿಮ್ ಜಮಾಅತ್ ಪಬ್ಲಿಸಿಟಿ ಕನ್ವೆನ್ಷನ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಸೈಯದ್ ಮದನಿ ಅರಬಿಕ್ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಝಿಯಾದ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲ್ ತಂಙಳ್ ದುಆ ನೆರವೇರಿಸಿದರು.
ಮಂಜನಾಡಿ ಅಲ್ ಮದೀನದ ಜನರಲ್ ಮ್ಯಾನೇಜರ್ ಖಾದರ್ ಸಖಾಫಿ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸೆಸ್ಸೆಫ್ ದ.ಕ.ಜಿಲ್ಲಾ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು.
ಉಳ್ಳಾಲ ಸೈಯದ್ ಮದನಿ ದರ್ಗಾದ ಮಾಜಿ ಅಧ್ಯಕ್ಷ ಹಂಝ ಹಾಜಿ, ಉಳ್ಳಾಲ ನಗರಸಭೆಯ ಸದಸ್ಯ ಯು.ಎ. ಇಸ್ಮಾಯೀಲ್, ಎಸ್‌ವೈಎಸ್ ದ.ಕ. ಜಿಲ್ಲಾ ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ್, ಎಸೆಸ್ಸೆಫ್ ಬೆಳ್ತಂಗಡಿ ಡಿವಿಜನ್ ಅಧ್ಯಕ್ಷ ಅಯ್ಯೂಬ್ ಮಳ್ಹರಿ, ಇಹ್ಸಾನ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಅಲ್ತಾಫ್ ಕುಂಪಲ, ಎಸ್‌ವೈಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ, ನಗರಸಭೆಯ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಮುಸ್ತಫ ಮಾಸ್ಟರ್, ಕಾರ್ಯದರ್ಶಿಗಳಾದ ಶಿಹಾಬ್ ತಲಪಾಡಿ, ನಾಸೀರ್ ಕೋಟೆಕಾರ್, ಜಾಫರ್ ತೊಕ್ಕೊಟ್ಟು, ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಶಮೀರ್ ಸೇವಂತಿ ಗುಡ್ಡೆ, ಉಳ್ಳಾಲ ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ, ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಕೊಮರಂಗಳ, ದೇರಳೆಕಟ್ಟೆ ಸೆಕ್ಟರ್ ಅಧ್ಯಕ್ಷ ಅಲ್ತಾಫ್ ಶಾಂತಿಬಾಗ್, ಕಿನ್ಯ ಸೆಕ್ಟರ್ ಕೋಶಾಧಿಕಾರಿ ಅಯ್ಯೂಬ್ ಕಿನ್ಯ ಉಪಸ್ಥಿತರಿದ್ದರು.
ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ಸ್ವಾಗತಿಸಿದರು. ಎಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಳೇಕಲ ವಂದಿಸಿದರು.







