ಸಜೀಪಮೂಡ: ಟಿಪ್ಪರ್ - ಬೊಲೆರೊ ಮುಖಾಮುಖಿ ಢಿಕ್ಕಿ
ಬಂಟ್ವಾಳ, ಜ. 17: ಟಿಪ್ಪರ್ ಮತ್ತು ಬೊಲೆರೊ ವಾಹನದ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ವಾಹನದ ಚಾಲಕ ಅಪಾಯದಿಂದ ಪಾರಾದ ಘಟನೆ ಸಜೀಪಮೂಡ ಗ್ರಾಮದ ಬೇಂಕ್ಯ ಎಂಬಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಮಾರ್ನಬೈಲ್ ನಿವಾಸಿ ಸೋಮನಾಥ್ ಎಂಬವರಿಗೆ ಸೇರಿದ ವಾಹನ ಎಂಬುವುದು ತಿಳಿದುಬಂದಿದೆ. ಢಿಕ್ಕಿಯ ರಭಸಕ್ಕೆ ಬೊಲೆರೋ ಎಡಬದಿ ಸಂಪೂರ್ಣ ಜಖಂಗೊಂಡಿದೆ.
ಮೆಲ್ಕಾರ್ ಟ್ರಾಫಿಕ್ ಎಸ್ಸೈ ಮಂಜುಳಾ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story