ಸಿಬಿಐಯಿಂದ ರಾಕೇಶ್ ಅಸ್ತಾನಾ ವರ್ಗಾವಣೆ
ಹೊಸದಿಲ್ಲಿ, ಜ. 17: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಪದಚ್ಯುತಿಗೊಳಿಸಿದ ವಾರಗಳ ಬಳಿಕ ರಾಕೇಶ್ ಆಸ್ತಾನಾರನ್ನು ಸಿಬಿಐಯಿಂದ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಇಬ್ಬರು ಅಧಿಕಾರಿಗಳ ನಡುವೆ ಈ ಹಿಂದೆ ಎಂದೂ ಕಂಡಿರದಂತಹ ತಿಕ್ಕಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಿಬಿಐ ವಿವಾದಕ್ಕೆ ತುತ್ತಾಗಿತ್ತು. ಅಲೋಕ್ ವರ್ಮಾ ಅವರನ್ನು ಸಿಬಿಐ ವರಿಷ್ಠರ ಹುದ್ದೆಯಿಂದ ಪದಚ್ಯುತಿಗೊಳಿಸಿರುವುದು ರಾಜಕೀಯ ಆಕ್ರೋಶಕ್ಕೆ ಕಾರಣವಾಗಿತ್ತು. ಜನವರಿ 24ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿದೆ. ಸಿಬಿಐಗೆ ನೂತನ ವರಿಷ್ಠರನ್ನು ನೇಮಕ ಮಾಡುವ ಹಿನ್ನೆಲೆಯಲ್ಲಿ ಪ್ರಮುಖ ಅಧಿಕಾರಿಗಳನ್ನು ವರ್ಗಾಯಿಸ ಲಾಗುತ್ತಿದೆ. ವರ್ಮಾ ತಂಡದ ಹಲವು ಇತರ ಸದಸ್ಯರನ್ನು ಕೂಡ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story