ಬಿಜೆಪಿಯ ಆಡಳಿತದಲ್ಲಿ ಬಡವರ, ಅಲ್ಪ ಸಂಖ್ಯಾತರ, ದಲಿತರ ಶೋಷಣೆ: ಜಿಗ್ನೇಶ್ ಮೆವಾನಿ
ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ವಿಪಕ್ಷಗಳ ಮೆಗಾ ರ್ಯಾಲಿ
ಕೊಲ್ಕತ್ತಾ, ಜ.19: ಆರೆಸ್ಸೆಸ್ ಮತ್ತು ಬಿಜೆಪಿಯ ಸೋಲನ್ನು ‘ಮಹಾಘಟಬಂಧನ’ವು ದೃಢಪಡಿಸುತ್ತದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬ್ರಿಗೇಡ್ ಪರೇಡ್ ಮೈದಾನದಲ್ಲಿ ವಿಪಕ್ಷ ನಾಯಕರ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಅವರು, “ಬಿಜೆಪಿಯ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಬಡವರ, ಅಲ್ಪ ಸಂಖ್ಯಾತರ ಹಾಗು ದಲಿತರ ಶೋಷಣೆಯಿಂದ ದೇಶವು ಬಿಕ್ಕಟ್ಟಿನೆಡೆಗೆ ಸಾಗುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ಸನ್ನು ಮಣಿಸಲು ಎಲ್ಲಾ ಪಕ್ಷಗಳು ಜೊತೆಗೂಡಿವೆ” ಎಂದು ಮೆವಾನಿ ಹೇಳಿದರು.
Next Story