ಇವಿಎಂಗಳು ‘ಕಳ್ಳ ಮೆಷಿನ್’ಗಳು: ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಫಾರೂಕ್ ಅಬ್ದುಲ್ಲಾ
![ಇವಿಎಂಗಳು ‘ಕಳ್ಳ ಮೆಷಿನ್’ಗಳು: ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಫಾರೂಕ್ ಅಬ್ದುಲ್ಲಾ ಇವಿಎಂಗಳು ‘ಕಳ್ಳ ಮೆಷಿನ್’ಗಳು: ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಫಾರೂಕ್ ಅಬ್ದುಲ್ಲಾ](https://www.varthabharati.in/sites/default/files/images/articles/2019/01/19/173597.jpg)
ಕೊಲ್ಕತ್ತಾ, ಜ.19: “ಇವಿಎಂಗಳು ಕಳ್ಳ ಮೆಷಿನ್ ಗಳಾಗಿದ್ದು, ಇವಿಎಂಗಳ ಬಳಕೆಯನ್ನು ನಿಲ್ಲಿಸಲು ಒತ್ತಾಯಿಸಿ ನಾವು ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿಯನ್ನು ಭೇಟಿಯಾಗಬೇಕು” ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಒತ್ತಾಯಿಸಿದರು.
ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿರುವ ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ಒಬ್ಬ ವ್ಯಕ್ತಿಯನ್ನು ತೆಗೆದುಹಾಕುವ ಹೋರಾಟ ಇದಲ್ಲ. ಇದು ದೇಶವನ್ನು ಉಳಿಸುವ ಹೋರಾಟ. ಸಾವಿರಾರು ಮಂದಿ ಪ್ರಾಣತ್ಯಾಗ ಮಾಡಿದ ನಂತರ ಈ ದೇಶ ಸ್ವತಂತ್ರಗೊಂಡಿತು. ಆದರೆ ಈ ಸರಕಾರ ಜನರನ್ನು ಧರ್ಮ, ಜಾತಿಯ ಆಧಾರದಲ್ಲಿ ಒಡೆಯುತ್ತಿದೆ. ನೀವು ತ್ಯಾಗಕ್ಕೆ ಸಿದ್ಧರಾಗಿರಬೇಕು. ವಿಭಜನಕಾರಿ ಶಕ್ತಿಗಳನ್ನು ಮಣಿಸಲು ನಾವೆಲ್ಲಾ ಒಂದಾಗಬೇಕು” ಎಂದು ಹೇಳಿದರು.
Next Story