ವಾಂತಿ ಮಾಡಲೆಂದು ಬಸ್ ಕಿಟಕಿಯಿಂದ ಇಣುಕಿದ ಮಹಿಳೆ: ವಿದ್ಯುತ್ ಕಂಬ ಬಡಿದು ತಲೆ ತುಂಡು
ಭೋಪಾಲ್, ಜ.19: ವಾಂತಿ ಮಾಡಲೆಂದು ಬಸ್ಸಿನ ಕಿಟಕಿಯ ಹೊರಗೆ ತಲೆ ಹಾಕಿದ 56 ವರ್ಷದ ಮಹಿಳೆಯ ತಲೆ ವಿದ್ಯುತ್ ಕಂಬಕ್ಕೆ ಬಡಿದು ದೇಹದಿಂದ ಬೇರ್ಪಟ್ಟು ರಸ್ತೆಗುರುಳಿದ ಘಟನೆ ಭೋಪಾಲ್ ನಗರದ ಡೈಮಂಡ್ ಕ್ರಾಸಿಂಗ್ ಸಮೀಪ ನಡೆದಿದೆ.
ಮಹಿಳೆ ಸತ್ನಾ ಜಿಲ್ಲೆಯಿಂದ ಪನ್ನಾ ಜಿಲ್ಲೆಯತ್ತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮೃತ ಮಹಿಳೆಯನ್ನು ಆಶಾ ರಾಣಿ ಎಂದು ಗುರುತಿಸಲಾಗಿದೆ. ನಿರ್ಲಕ್ಷ್ಯದ ಚಲಾವಣೆಗಾಗಿ ಬಸ್ಸು ಚಾಲಕನನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆ ನೆರೆಯ ಛತಪುರ್ ಜಿಲ್ಲೆಯವರೆಂದು ತಿಳಿದು ಬಂದಿದೆ.
Next Story