‘ಚೌಕಿದಾರ ಕಳ್ಳ’ ಎಂದು ಜನರು ಹೇಳುವ ಮೊದಲು ರಫೇಲ್ ಬಗ್ಗೆ ಸ್ಪಷ್ಟೀಕರಣ ನೀಡಿ: ಶತ್ರುಘ್ನ ಸಿನ್ಹಾ
ಕೊಲ್ಕತಾ,ಜ.19: ರಫೇಲ್ ಒಪ್ಪಂದದ ಬಗ್ಗೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸ್ಪಷ್ಟೀಕರಣ ನೀಡಿ. ಇಲ್ಲದಿದ್ದರೆ ಜನರು ಚೌಕಿದಾರ್ ಕಳ್ಳನಾಗಿದ್ದಾನೆ ಎಂದು ಹೇಳಲು ಆರಂಭಿಸುತ್ತಾರೆ ಎಂದು ಬಿಜೆಪಿಯಲ್ಲೇ ಇದ್ದು ಪ್ರಧಾನಿ ಮೋದಿಯ ಪ್ರಬಲ ಟೀಕಾಕಾರರಲ್ಲಿ ಒಬ್ಬರಾಗಿರುವ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ರಫೇಲ್ ಯುದ್ಧವಿಮಾನಕ್ಕೆ ಮೋದಿ ಮೂರು ಪಟ್ಟು ಹೆಚ್ಚು ಬೆಲೆ ನೀಡಲು ಮುಂದಾಗಿದ್ದರೂ ಯಾಕೆ ಎಂಬುದಕ್ಕೆ ಅವರು ಸ್ಪಷ್ಟನೆ ನೀಡಬೇಕು ಎಂದು ಸಿನ್ಹಾ ತಿಳಿಸಿದ್ದಾರೆ. ವಿರೋಧ ಪಕ್ಷಗಳು ನಿಮ್ಮಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಿದೆ. ಅದಕ್ಕೆ ನೀವು ಉತ್ತರಿಸದಿದ್ದರೆ ಜನರು ನಿಮ್ಮನ್ನು ಕಳ್ಳ ಎಂದು ಕರೆಯುತ್ತಾರೆ ಎಂದು ಸಿನ್ಹಾ ಮೋದಿ ವಿರುದ್ಧ ಗುಡುಗಿದ್ದಾರೆ.
Next Story