Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಅಂಡರ್-21 ವಿಭಾಗದಲ್ಲಿ ಚಂಡಿಗಡಕ್ಕೆ...

ಅಂಡರ್-21 ವಿಭಾಗದಲ್ಲಿ ಚಂಡಿಗಡಕ್ಕೆ ಚಿನ್ನ

ಖೇಲೋ ಇಂಡಿಯಾ ಕಬಡ್ಡಿ

ವಾರ್ತಾಭಾರತಿವಾರ್ತಾಭಾರತಿ19 Jan 2019 11:49 PM IST
share

ಪುಣೆ, ಜ.19: ಕೊನೆಯ ನಿಮಿಷದವರೆಗೂ ರೋಚಕತೆ ಉಳಿಸಿಕೊಂಡಿದ್ದ ಪುರುಷರ ಅಂಡರ್-21 ವಿಭಾಗದ ಕಬಡ್ಡಿ ಫೈನಲ್ ಪಂದ್ಯದಲ್ಲಿ ಚಂಡಿಗಡ, ತಮಿಳುನಾಡು ತಂಡವನ್ನು ಮಣಿಸಿ ಬಂಗಾರದ ಪದಕ ಗೆದ್ದುಕೊಂಡಿತು. ಆ ಮೂಲಕ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕಬಡ್ಡಿ ಸ್ಪರ್ಧೆಗಳು ಅಂತ್ಯಕಂಡವು.

ನಿಗದಿತ ಸಮಯ ಮುಗಿದಾಗ ಎರಡೂ ತಂಡಗಳು 40-40 ಸಮಾನ ಅಂಕ ಗಳಿಸಿದ್ದವು. ಆದರೆ ಹೆಚ್ಚುವರಿ ಸಮಯದಲ್ಲಿ ಗೋಲ್ಡನ್ ರೈಡ್ ಮೂಲಕ ಚಂಡಿಗಡ 1 ಅಂಕ ಗಳಿಸಿ 41-40 ಅಂಕಗಳಿಂದ ಜಯ ಗಳಿಸಿತು.

ಪಂದ್ಯದ ದ್ವಿತೀಯಾರ್ಧ ಅಂತ್ಯವಾಗಲು ಕೆಲವೇ ಸೆಕೆಂಡ್‌ಗಳು ಬಾಕಿ ಇದ್ದಾಗ ಸ್ಕೋರ್ 40-39 ಆಗಿತ್ತು. ತಮಿಳುನಾಡು ತಾನು ಗೆದ್ದೆ ಎಂಬ ಉತ್ಸಾಹದಲ್ಲಿತ್ತು. ಆದರೆ ಈ ಹಂತದಲ್ಲಿ ತಮಿಳುನಾಡು ಆಟಗಾರನ ಯಡವಟ್ಟು ಚಂಡಿಗಡಕ್ಕೆ ವರವಾಯಿತು. ಪಂದ್ಯ ಮುಗಿಸುವ ಸೀಟಿ ಊದುವ ಮುನ್ನವೇ ಬದಲಿ ಆಟಗಾರನಾಗಿದ್ದ ಆತ ಅಂಗಣಕ್ಕೆ ಪ್ರವೇಶಿಸಿದ್ದ. ಇದರಿಂದ ಚಂಡಿಗಡಕ್ಕೆ ಒಂದು ತಾಂತ್ರಿಕ ಅಂಕ ದಕ್ಕಿತು. ಈ ವೇಳೆ ಸ್ಕೋರ್ 40-40ರಿಂದ ಸಮಬಲವಾಯಿತು. ಭಾರತದ ರಾಷ್ಟ್ರೀಯ ಕಬಡ್ಡಿ ತಂಡದ ಸ್ಟಾರ್ ಆಟಗಾರ ದೀಪಕ್ ನರ್ವಾಲ್ ಅವರ ಸಹೋದರ ಅಂಕುಶ್ ನರ್ವಾಲ್ ಚಂಡಿಗಡಕ್ಕೆ ಹೆಚ್ಚುವರಿ ರೇಡ್‌ನಲ್ಲಿ ಅಂಕ ತಂದುಕೊಟ್ಟು ಹೀರೊ ಆಗಿ ಮೆರೆದರು.

ಈ ವಿಭಾಗದಲ್ಲಿ ಉತ್ತರಪ್ರದೇಶ ಹಾಗೂ ಕೇರಳ ತಂಡಗಳು ಕಂಚಿನ ಪದಕಕ್ಕೆ ತೃಪ್ತಿಪಟ್ಟವು.

ಬಾಲಕಿಯರ ಹಾಕಿಯಲ್ಲಿ ಹರ್ಯಾಣ ಪಾರಮ್ಯ

ಪುಣೆ, ಜ.19: ಸ್ಟ್ರೈಕರ್ ದೀಪಿಕಾ ಅವರ ಅವಳಿ ಗೋಲುಗಳ ನೆರವಿನಿಂದ ಹರ್ಯಾಣ ಬಾಲಕಿಯರ ಹಾಕಿ ತಂಡ ಖೇಲೋ ಇಂಡಿಯಾ ಗೇಮ್ಸ್‌ನ ಅಂಡರ್-17 ವಿಭಾಗದ ಫೈನಲ್‌ನಲ್ಲಿ ಜಾರ್ಖಂಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿತು. ಶನಿವಾರ ಇಲ್ಲಿಯ ನ್ಯಾಶನಲ್ ಡಿಫೆನ್ಸ್ ಅಕಾಡಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಾರ್ಖಂಡ್ ಗಮನಾರ್ಹ ಸಾಧನೆ ತೋರಿದರೂ ಬೆಳ್ಳಿ ಪದಕ ಜಯಿಸಿ ಅಭಿಮಾನಿಗಳ ಹೃದಯ ಗೆಲುವಲ್ಲಿ ಯಶಸ್ವಿಯಾಯಿತು.

<ಅತ್ಯಂತ ತುರುಸಿನಿಂದ ನಡೆದ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿ ದಂಡ ತೆತ್ತಿತು. ಹರ್ಯಾಣ ಪರ ದೀಪಿಕಾ ಅವಳಿ ಗೋಲು ಬಾರಿಸಿದರೆ, ಜಾರ್ಖಂಡ್ ಪರ ಪ್ರಿನಿ ಕಂದಿರ್ ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿದರು. ಒಡಿಶಾಗೆ ಕಂಚು: ಬೆಳಗ್ಗೆ ನಡೆದ ಮತ್ತೊಂದು ಪಂದ್ಯದಲ್ಲಿ ಒಡಿಶಾ ತಂಡ, ಪಂಜಾಬ್ ಸವಾಲನ್ನು ಹಿಮ್ಮೆಟ್ಟಿಸಿ 3-2 ಗೋಲುಗಳ ಅಂತರದಿಂದ ಜಯಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಒಡಿಶಾ ಪರ ಪ್ರಥಮಾರ್ಧದಲ್ಲೇ ಸುನೀತಾ ಕ್ಸಾಕ್ಸಾ, ಜ್ಯೋತಿ ಚಾತ್ರಿ ಹಾಗೂ ನಿಂಬಾತಿ ಸಿಂಗ್ ತಲಾ ಒಂದು ಬಾರಿಸಿ 3-1ರ ಮುನ್ನಡೆಗೆ ಕಾರಣರಾಗಿದ್ದರು. ಪಂಜಾಬ್ ಪರ ಚೆವಾಂಗ್ ತಮಾಂಗ್ ಹಾಗೂ ಸಿಮ್ರನ್‌ಜಿತ್ ಕೌರ್ ತಲಾ ಒಂದು ಗೋಲು ಹೊಡೆದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X