Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾಭಾರತಿವಾರ್ತಾಭಾರತಿ20 Jan 2019 12:02 AM IST
share
ದಿಲ್ಲಿ ದರ್ಬಾರ್

ಜೇಟ್ಲಿ ಭವಿಷ್ಯ
ಹಣಕಾಸು ಸಚಿವ ಅರುಣ್ ಜೇಟ್ಲಿ ನಿತಂಬದ ಮೆದು ಅಂಗಾಂಶ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವ ಸಲುವಾಗಿ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಇದು ಒಂದು ಬಗೆಯ ಟ್ಯೂಮರ್ ಆಗಿದ್ದು, ದೇಹದ ಇತರ ಭಾಗಗಳಿಗೆ ಕ್ಷಿಪ್ರವಾಗಿ ಹರಡಬಲ್ಲದು. ಇದನ್ನು ಹೊರತೆಗೆಯುವ ಶಸ್ತ್ರಚಿಕಿತ್ಸೆ ಅತ್ಯಂತ ಸಂಕೀರ್ಣ ಎನ್ನುವುದು ಈ ಬಗ್ಗೆ ಅರಿವು ಇರುವವರ ಅಭಿಪ್ರಾಯ. ಏಕೆಂದರೆ ಜೇಟ್ಲಿ ಕಳೆದ ವರ್ಷವಷ್ಟೇ ಕಿಡ್ನಿ ಕಸಿಗೆ ಒಳಗಾಗಿದ್ದರು, ಯಾವುದೇ ಹೊಸ ಶಸ್ತ್ರಚಿಕಿತ್ಸೆ ಮತ್ತು ಆ ಬಳಿಕದ ಕಿಮೋಥೆರಪಿ, ಇನ್ನಷ್ಟೇ ದೇಹದ ಜತೆ ಹೊಂದಿಕೊಳ್ಳಬೇಕಾಗಿರುವ ಮೂತ್ರಕೋಶಕ್ಕೆ ಹೆಚ್ಚಿನ ದಣಿವು ಉಂಟಾಗಲು ಕಾರಣವಾಗುತ್ತದೆ. ಕಿಡ್ನಿ ಕಸಿ ಬಳಿಕ ಯಾವುದೇ ಸೋಂಕು ತಗಲದಂತೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವ ಜೇಟ್ಲಿ, ವಾಣಿಜ್ಯ ವಿಮಾನದ ಬದಲಾಗಿ ಆ್ಯಂಬುಲೆನ್ಸ್ ವಿಮಾನದ ಮೂಲಕ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಕಳೆದ ಕೆಲ ಕಾಲದಿಂದ ಜೇಟ್ಲಿಯವರಿಗೆ ಹಸ್ತಲಾಘವ ನೀಡುವುದು ಕೂಡಾ ನಿಷಿದ್ಧ. ಪತ್ರಿಕಾಗೋಷ್ಠಿ ನಡೆಸುವಾಗ ಕೂಡಾ ಸಚಿವರು ಸಾಕಷ್ಟು ಅಂತರ ಕಾಯ್ದುಕೊಳ್ಳುತ್ತಾರೆ. ಇದೀಗ ಜೇಟ್ಲಿಯ ಮುಂಬರುವ ಮಧ್ಯಂತರ ಬಜೆಟ್ ರೈತರನ್ನು ಆಕರ್ಷಿಸುವ ಕೆಲ ಪ್ರಮುಖ ನಿರ್ಧಾರಗಳನ್ನು ಒಳಗೊಂಡಿದೆ ಎನ್ನಲಾಗಿದ್ದು, ಅದನ್ನು ಮಂಡಿಸುವ ಅವಕಾಶವನ್ನು ಕೂಡಾ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿದೆ. ಆದರೆ ಜೇಟ್ಲಿ ಮಾತ್ರ ತಮ್ಮ ಪ್ರಸ್ತುತತೆ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದು, ನ್ಯೂಯಾರ್ಕ್‌ನಿಂದಲೇ ಬ್ಲಾಗ್ ಬರೆಯುತ್ತಿದ್ದಾರೆ. ಅವರು ಅಸ್ವಸ್ಥರಾಗಿರಬಹುದು; ಆದರೆ ತೆರೆಮರೆಗೆ ಸರಿದಿಲ್ಲ.


ತಿರುಗುಬಾಣವಾದ ಶಾ ನೀತಿ
ಹಂದಿಜ್ವರಕ್ಕೆ ತುತ್ತಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಷ್ಟ್ರ ರಾಜಧಾನಿಯ ಪ್ರತಿಷ್ಠಿತ ಎಐಐಎಂಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆಯಲ್ಲಿ ತಡೆ ಮತ್ತು ಉಸಿರಾಟದ ತೊಂದರೆಗಾಗಿ ಇತ್ತೀಚೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೂಡಾ ಇತರ ಆರೋಗ್ಯ ಸಮಸ್ಯೆಗಾಗಿ ಎಐಐಎಂಎಸ್‌ಗೆ ದಾಖಲಾಗಿದ್ದರು. ಆ ಬಳಿಕ ಆಸ್ಪತ್ರೆಗೆ ಜ್ವರದ ಕಾರಣದಿಂದ ದಾಖಲಾದವರು ಮತ್ತೊಬ್ಬ ಬಿಜೆಪಿ ಮುಖಂಡ ರಾಮ್ ಲಾಲ್. ಹೀಗೆ ಬಿಜೆಪಿ ಮುಖಂಡರು ಸರದಿಯಲ್ಲಿ ಆಸ್ಪತ್ರೆ ಸೇರುವುದಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಒಂದರ್ಥದಲ್ಲಿ ಕಾರಣ ಎಂದು ಕೆಲವರು ಗೊಣಗುತ್ತಿದ್ದಾರೆ. ಆದರೆ ಅದು ನಿಜವಾಗಿರುವ ಸಾಧ್ಯತೆಯಂತೂ ಇಲ್ಲ. ಅವರು ನೀಡುವ ಕಾರಣವೆಂದರೆ, ಬಿಜೆಪಿ ರಾಷ್ಟ್ರೀಯ ಸಮಾವೇಶದ ಸಂಯೋಜಕರು ದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಣದಲ್ಲಿ ಈ ಸಮಾರಂಭ ಆಯೋಜಿಸಲು ಉದ್ದೇಶಿಸಿದ್ದರು. ಆದರೆ ಇದು ಇನ್ನು ವಿಸ್ತಾರವಾದ ಪ್ರದೇಶದಲ್ಲಿ ನಡೆಯಬೇಕು ಎಂದು ಸೂಚಿಸಿದ ಶಾ, ಇದನ್ನು ರಾಮ್‌ಲೀಲಾ ಮೈದಾನಕ್ಕೆ ಸ್ಥಳಾಂತರಿಸಿದರು. ಆದರೆ ಸಂಘಟಕರಿಗೆ ಇದ್ದ ಮುಖ್ಯ ಆತಂಕವೆಂದರೆ, ದಿಲ್ಲಿಯ ಭೀಕರ ಚಳಿ. ದಿಲ್ಲಿಯ ಚಳಿ ತಡೆದುಕೊಳ್ಳುವುದು ಹಲವು ಮಂದಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕಷ್ಟವಾಗಬಹುದು ಎನ್ನುವುದು ಅವರ ಆತಂಕವಾಗಿತ್ತು. ಆದರೆ ಶಾ ಅದನ್ನು ತಳ್ಳಿಹಾಕಿದ್ದರು. ಈ ಚಳಿ ಹಾಗೂ ತೆರೆದ ಬಯಲಿನಲ್ಲಿ ನಡೆದ ರಾಷ್ಟ್ರೀಯ ಸಮಾವೇಶ ಈ ಸರಣಿ ಅಸ್ವಸ್ಥತೆಗೆ ಕಾರಣವೇ? ಅಲ್ಲದಿರಬಹುದು. ಆದರೆ ಅಂಥ ಪ್ರಶ್ನೆಯಂತೂ ಎದ್ದಿದೆ.


ಸ್ಫೂರ್ತಿ ತುಂಬಿದ ಮೋದಿ
ಬಿಜೆಪಿಗೆ ನೆರವಾಗಬಹುದಾದ ಉತ್ತೇಜನಕಾರಿ ಅಂಶವೆಂದರೆ ತಳಹಂತದ ಕಾರ್ಯಕರ್ತರ ಜತೆ ಮೋದಿ ಹೊಂದಿರುವ ಸಂಪರ್ಕ. ಪ್ರಧಾನಿಯಾಗಿದ್ದೂ, ಅಟಲ್ ಬಿಹಾರಿ ವಾಜಪೇಯಿಯವರಂತೆ ಪಕ್ಷದ ಕೇಂದ್ರ ಕಚೇರಿಗೆ ನೀಡುವ ಭೇಟಿಯನ್ನು ಅವರು ಕಡಿತಗೊಳಿಸಿಲ್ಲ. ದೀನ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿಯನ್ನು ಹೆಸರು ಹಿಡಿದು ಕರೆದು, ಅವರ ಯೋಗಕ್ಷೇಮ ವಿಚಾರಿಸುವ ಮೂಲಕ 2019ನ್ನು ಬರಮಾಡಿಕೊಂಡು ಅಚ್ಚರಿ ಮೂಡಿಸಿದ್ದರು. ಜತೆಗೆ ಮುಂದೆ ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗೆಗೆ ಕಾರ್ಯಕರ್ತರಿಗೆ ಉತ್ತೇಜದಾಯಕ ಭಾಷಣವನ್ನೂ ಮಾಡಿದರು. ಹಳೆ ಶೈಲಿಯಂತೆ ಯುದ್ಧಕ್ಕೆ ಸನ್ನದ್ಧರಾಗಲು ಭೇಟಿಮಾಡಿ ಅಭಿನಂದನೆ ಹೇಳುವ ಬದಲು ಈ ವಿನೂತನ ಪ್ರಯತ್ನದ ಮೂಲಕ ಗಮನ ಸೆಳೆದರು. 2019ರ ಚುನಾವಣೆ ಕಠಿಣ ಹಾಗೂ ಉತ್ಸಾಹಿ ಕಾರ್ಯಕರ್ತರ ಪಡೆಯಿಂದಷ್ಟೇ ಇದನ್ನು ಗೆಲ್ಲಲು ಸಾಧ್ಯ ಎನ್ನುವ ಅರಿವು ಮೋದಿಯವರಿಗೆ ಇದೆ. ಆದ್ದರಿಂದ ಬಿಡುವಿದ್ದಾಗಲೆಲ್ಲ ಹೆಚ್ಚು ಹೆಚ್ಚು ಕಾರ್ಯಕರ್ತರನ್ನು ಭೇಟಿ ಮಾಡುವ ಯೋಜನೆ ಅವರದ್ದು.


ಬರೂ ಬಗ್ಗೆ ಮುನಿಸು
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬರೂ ಅವರ ಕೃತಿ ಆಧರಿತ ಚಿತ್ರ ‘ಆ್ಯಕ್ಸಿಡೆಂಟಲ್ ಪ್ರೈಮ್‌ಮಿನಿಸ್ಟರ್’ ಬಾಕ್ಸ್ ಆಫೀಸ್‌ನಲ್ಲಿ ಅಂಥ ದೊಡ್ಡ ಸದ್ದು ಮಾಡಿಲ್ಲ. ಆದರೆ ಅದು ಭಾರತದ ರಾಜಕಾರಣದಲ್ಲಿ ಮಾತ್ರ ಗದ್ದಲ ಎಬ್ಬಿಸಿದೆ. ಆದರೆ ಸಭ್ಯರಾದ ಸಿಂಗ್ ಈ ಅಸಂಸ್ಕೃತ ಮೇಲಾಟಕ್ಕೆ ಮುಂದಾಗುವವರಲ್ಲ. ಆಡಳಿತಾರೂಢ ಬಿಜೆಪಿ ಪ್ರಾಯೋಜಿತ ಚಿತ್ರ ಎನಿಸಿದ, ಅವರ ಅವಧಿಯ ಬಗೆಗಿನ ಚಿತ್ರಣ ನೀಡುವ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಿಂಗ್ ನಿರಾಕರಿಸಿದ್ದಾರೆ. ಆದರೆ ಅವರ ಆಪ್ತರ ಮಾತುಗಳನ್ನು ನಂಬಬಹುದಾದರೆ, ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರರ ವರ್ತನೆ ಬಗ್ಗೆ ಅವರಿಗೆ ತೀರಾ ನೋವು ಹಾಗೂ ಸಿಟ್ಟು ಇದೆ. ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿದವರೊಬ್ಬರ ಜತೆ ಮಾತನಾಡುತ್ತಾ, ಬರೂ ನನ್ನ ವಿಶ್ವಾಸ ದುರ್ಬಳಕೆ ಮಾಡಿಕೊಂಡರು ಎಂದು ಸಿಟ್ಟು ಹೊರಹಾಕಿದರು ಎನ್ನಲಾಗಿದೆ. ಉದಾಹರಣೆಗೆ ಸಿಂಗ್ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ.ನಾರಾಯಣನ್, ಈ ಚಿತ್ರದ ಅಂಶಗಳನ್ನು ಶುದ್ಧ ಸುಳ್ಳು ಎಂದು ಬಣ್ಣಿಸಿದ್ದಾರೆ ಹಾಗೂ ಸಂಜಯ್ ಬರೂ ಅವರನ್ನು ನಿಷ್ಠಾಂತರ ಮಾಡಿದ ವ್ಯಕ್ತಿ ಎಂದು ಜರೆದಿದ್ದಾರೆ. ಕೋಲ್ಕತಾದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಈ ಕೃತಿ ತೃತೀಯ ದರ್ಜೆಯ ಶುದ್ಧ ಸುಳ್ಳಿನಿಂದ ತುಂಬಿದೆ ಎಂದು ಹೇಳಿದ್ದರು. ರಾಜಕೀಯ ಪಕ್ಷಗಳ ವಿಚಾರಕ್ಕೆ ಬಂದಾಗ ಮಾಧ್ಯಮ ಸಲಹೆಗಾರರು ತೀರಾ ಹೊರಗಿನವರು ಎನ್ನುವ ಸಾರ್ವತ್ರಿಕ ಸತ್ಯ ಎಲ್ಲರಿಗೆ ತಿಳಿದಿರುವಂಥದ್ದು. ಇವರ ಕೆಲಸ ಪ್ರಮುಖವಾಗಿ ಮಾಧ್ಯಮಕ್ಕೆ ಹೇಳುವ ಸಂದೇಶವನ್ನು ರವಾನಿಸುವುದು ಮತ್ತು ಅಪರೂಪಕ್ಕೊಮ್ಮೆ ಮಾಧ್ಯಮ ಸಂಬಂಧಿ ವಿಷಯಗಳ ಬಗ್ಗೆ ಮತ್ತು ಪ್ರಧಾನಿ ಭಾಷಣದ ಬಗ್ಗೆ ಚರ್ಚಿಸುವುದಕ್ಕಷ್ಟೇ ಸೀಮಿತ. ಆದರೆ ಬರೂ ಮಾತ್ರ ನೀತಿ ನಿರ್ಣಯ ಪ್ರಕ್ರಿಯೆಯ ಮತ್ತು ತೆರೆಮರೆಯ ರಾಜಕೀಯದ ಅವಿಭಾಜ್ಯ ಅಂಗವಾಗಿದ್ದೆ ಎಂದು ಬಿಂಬಿಸಲು ಹೊರಟಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X