ಪೆಟ್ರೋಲ್, ಡೀಸಿಲ್ ಬೆಲೆ ಏರಿಕೆ
ಹೊಸದಿಲ್ಲಿ,ಜ.20: ಅಮೆರಿಕದ ಡಾಲರ್ನೆದುರು ರೂಪಾಯಿಯ ಅಲ್ಪ ಕುಸಿತ ಮತ್ತು ಜಾಗತಿಕ ಕಚ್ಚಾತೈಲಗಳ ಬೆಲೆಗಳಲ್ಲಿ ಏರಿಕೆಯಿಂದಾಗಿ ರವಿವಾರ ಪ್ರತಿ ಲೀ.ಪೆಟ್ರೋಲ್ ಬೆಲೆಯಲ್ಲಿ 23 ಪೈಸೆ ಮತ್ತು ಡೀಸಿಲ್ ಬೆಲೆಯಲ್ಲಿ 29ರಿಂದ 31 ಪೈಸೆ ಹೆಚ್ಚಳವಾಗಿದೆ.
ರವಿವಾರ ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆ 70.95 ರೂ. ಮತ್ತು ಡೀಸಿಲ್ ಬೆಲೆ 65.45 ರೂ. ಆಗಿದ್ದವು.
ಡಾಲರ್ ಎದುರು ರೂಪಾಯಿ ಕುಸಿತ ಮತ್ತು ಜಾಗತಿಕ ಕಚ್ಚಾತೈಲಗಳ ಬೆಲೆಗಳಲ್ಲಿ ಏರಿಕೆಯ ಹಿನ್ನೆಲೆಯಲ್ಲಿ ಜ.7ರಿಂದಲೂ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳು ಹೆಚ್ಚುತ್ತಲೇ ಇವೆ.
Next Story